ಲಾಕ್ ಡೌನ್, ಕೊರೋನಾ, ವರ್ಕ ಫ್ರಂ ಹೋಮ್ ಅಂಥ ಇಡೀ ದಿನ ಮನೆಯೊಳಗೆ ನಾವೆಲ್ಲ ಕಾಲ ಕಳೆಯುತ್ತೇವೆ. ಸೂರ್ಯನ ಮೂಖ ನೋಡದೇನೆ ಎಷ್ಟೋ ದಿನವಾಗಿರುತ್ತದೆ. ನಮ್ಮ ದೇಹಕ್ಕೆ ಹೇಗೆ ಆಹಾರ, ನೀರು, ಗಾಳಿ ಬೇಕೋ ಹಾಗೆಯೇ ಸೂರ್ಯನ ಬಿಸಿಲು ಕೂಡ ಅವಶ್ಯಕ. ದಿನದಲ್ಲಿ 15 ನಿಮಿಷವಾದರು ನಿಮ್ಮ ದೇಹವನ್ನು ಸೂರ್ಯನ ಬಿಸಿಲಿಗೆ ಒಡ್ಡಿ. ಏಕೆ ಗೊತ್ತಾ? ಇಲ್ಲಿದೆ ಮಾಹಿತಿ..
ನಿದ್ರೆ:
ಮೈ ಬಿಸಿಲಿಗೆ ಚೆನ್ನಾಗಿ ಕಾದರೆ ಒಳ್ಳೆಯ ನಿದ್ದೆ ಬರುತ್ತದೆ. ನಿದ್ರಾ ಹೀನತೆ ಇರುವವರು ಸೂರ್ಯನ 12 ಗಂಟೆಯ ಬಿಸಿಲಿನಲ್ಲಿ 30 ನಿಮಿಷ ಮೈ ಬಿಸಿಮಾಡಿಕೊಳ್ಳಿ. ನಿದ್ರೆ ಚೆನ್ನಾಗಿ ಬರುತ್ತದೆ.
ಒತ್ತಡ:
ಬಿಸಿಲಿನಲ್ಲಿ ಸ್ವಲ್ಪ ಸಮಯ ಕಾಲ ಕಳೆಯುವುದರಿಂದ ಒತ್ತಡ ಕಡಿಮೆ ಆಗುತ್ತದೆ.
ಗಟ್ಟಿ:
ದೇಹದ ಮೂಳೆಗಳು ಸೂರ್ಯನ ಬಿಸಿಲಿಗೆ ಗಟ್ಟಿಯಾಗುತ್ತದೆ. ಶಕ್ತಿ ಹೆಚ್ಚುತ್ತದೆ.
ದೃಷ್ಟಿ:
ದೃಷ್ಟಿ ದೋಷವಿರುವವರು ಬೆಳಿಗ್ಗೆ ಉದಯಿಸುತ್ತಿರುವ ಎಳೆ ಸೂರ್ಯನನ್ನು ಬರಿ ಗಣ್ಣಿನಿಂದ ನೋಡಬೇಕು. ದೃಷ್ಟಿ ದೋಶ ಕಡಿಮೆ ಆಗುತ್ತದೆ.
ರೋಗ ನಿರೋಧಕ ಶಕ್ತಿ:
ಸೂರ್ಯನ ಬಿಸಿಲಿನಲ್ಲಿ ನಮ್ಮ ದೇಹಕ್ಕೆ ಬೇಕಾಗುವ ವಿಟಮಿನ್’ಗಳು ಇರುತ್ತವೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಚರ್ಮ:
ಚರ್ಮ ರೋಗಗಳು ನಿವಾರಣೆಯಾಗುತ್ತದೆ. ಬಿಳಿ ಕಲೆಯಾಗುವುದು, ಗುಳ್ಳೆಗಳಾಗುವುದು ಹೀಗೆ ಅನೇಕ ಚರ್ಮ ರೋಗಗಳು ಬಿಸಿಲಿಗೆ ಮೈ ಒಡ್ಡುವುದರಿಂದ ನಿವಾರಣೆಯಾಗುತ್ತದೆ.