Sunday, January 17, 2021

Latest Posts

ಚಾಕು ಇರಿತ: 6 ಜನರ ಬಂಧನ

ಧಾರವಾಡ: ಚಾಕು ಇರಿತ ಪ್ರಕರಣ ಕುರಿತಂತೆ ಮಿಂಚಿನ ಕಾರ್ಯಾಚರಣೆ ನಡೆಸಿದ ಉಪನಗರ ಠಾಣೆಯ ಪೊಲೀಸರು 24 ಗಂಟೆಗಳಲ್ಲಿ ಆರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶ ಕಂಡಿದ್ದಾರೆ.
ನಾಗರಾಜ ಹೊಂಗಣ್ಣವ, ಆದರ್ಶ ನಾಯಕ, ವಿರೇಶ ಸೊಟ್ಟನಾಳ, ಭರತ ಕರೆಣ್ಣವರ, ದತ್ತು ಅಲಿಯಾಸ್ ಸಂಗಮೇಶ ಕಮಾಟಿ ಹಾಗೂ ವಿನಾಯಕ ಕಲಬುರ್ಗಿ ಬಂಧಿತರು.
ಘಟನೆ ವಿವರ: ಯತ್ತಿನಗುಡ್ಡದ ಉದಯ ಕೆಲಗೇರಿ, ಮನೋಜ ಜಮನಾಳ ಹಾಗೂ ಸುರೇಶ ಅವರಾಧಿ ಕ್ಷಲ್ಲಕ ಕಾರಣಕ್ಕೆ ಮದರಾಮಡ್ಡಿಯಲ್ಲಿ ಪರಸ್ಪರ ಜಗಳ ಮಾಡಿದ್ದರು.
ಆದರೆ, ಸಂಜೆ ಈ ಮೂವರ ಜಗಳ ಬಗೆಹರಿಸುವುದಾಗಿ ಸಪ್ತಾಪೂರ ಸರ್ಕಲ್‌ಗೆ ಬರಲು ಹೇಳಿದ ಬಂಧಿತರು, ಚಾಕು ಮೂಲಕ ಮಾರಣಾಂತಿಕ ಹಲ್ಲೆ ಮಾಡಿ, ಪರಾರಿಯಾಗಿದ್ದರು.
ಅಲ್ಲದೇ, ಬಂಧಿತರ ವಿರುದ್ಧ ಜಾತಿ ನಿಂಧನೆ, ಅವಳಹೇಳನ, ಜೀವ ಬೇದರಿಕೆ, ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಗಂಭೀರವಾಗಿ ಪರಗಣಿಸಿದ ಉಪನಗರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರು ಜನರನ್ನು ಬಂಧಿಸಿ, ವಿಚಾರಣೆ ಕೈಗೊಂಡಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!