ಚಾಮರಾಜನಗರ: ಜಿಲ್ಲೆಯಲ್ಲಿ ಇಂದು ಸಹ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದು, 964 ಮಂದಿಯ ಗಂಟಲು ದ್ಯವ ಪರೀಕ್ಷೆಯಿಂದ 17 ಮಂದಿಗೆ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಕೊಳ್ಳೇಗಾಲ ಹಾಗು ಗುಂಡ್ಲುಪೇಟೆಯಲ್ಲಿ ಹೆಚ್ಚಳವಾಗಿದೆ. ಸೋಂಕಿತರ ಸಂಖ್ಯೆ 200 ರ ಗಡಿ ದಾಡಿದೆ. ಜಿಲ್ಲಾ ಅಸ್ಪತ್ರೆಯ ವೈದ್ಯರೊಬ್ಬರು ಹಾಗು ಸಹಾಯಕ ಔಷಧಿ ನಿಯಂತ್ರಕನಿಗೂ ಕೋರಾನ ಪಾಸಿಟಿವ್ ದೃಢ ಪಟ್ಟಿದೆ. ಅಸ್ಪತ್ರೆಯ ಔಷಧಿ ವಿಭಾಗಕ್ಕೆ ಸ್ಯಾನಿಟೈಸರ್ ಸಿಂಪಡಿಸಲಾಗಿದೆ. ಸೋಂಕು ತಗಲಿರುವ ವೈದ್ಯರಿಗೆ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ನಾಲ್ಕು ದಿನದಿಂದ ಆಸ್ಪತ್ರೆಗೆ ಬಂದಿಲ್ಲ ಎನ್ನಲಾಗಿದೆ.
ಸೋಮವಾರಪೇಟೆಯಲ್ಲಿ 60 ವರ್ಷದ ವೃದ್ದನಿಗೆ ಪಾಸಿಟಿವ್ ಆಗಿದ್ದು, ಆತ ಗುಣಮುಖರಾಗಿ ಇತ್ತಿಚೆಗೆ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಈಗ ಮೊಮ್ಮಗಳಿಗೆ ಪಾಸಿಟಿವ್ ಕಾಣಿಸಿಕೊಂಡಿದೆ
ಈಗಾಗಲೇ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 234ಕ್ಕೆ ಏರಿಕೆಯಾಗಿದೆ. ಈ ಪೈಕಿ 135 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 96 ಸಕ್ರಿಯ ಪ್ರಕರಣಗಳಿದ್ದು, 6 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ., ಮೂವರು ಮೃತಪಟ್ಟಿದ್ದಾರೆ.
ಜಿಲ್ಲೆಯ 17 ಪ್ರಕರಣದಲ್ಲಿ ಚಾಮರಾಜನಗರ ತಾಲೂಕಿನಲ್ಲಿ 6, ಗುಂಡ್ಲುಪೇಟೆ ತಾಲೂಕಿನ 6, ಕೊಳ್ಳೇಗಾಲ ತಾಲೂಕಿನಲ್ಲಿ 4, ಯಳಂದೂರು ತಾಲೂಕಿನಲ್ಲಿ ಒಂದು ಪ್ರಕರಣ ದಾಖಲಾಗಿದೆ. ಇಂದಿನ ಪ್ರಕರಣಗಳಲಿ 6 ಮಂದಿ ಬೆಂಗಳೂರಿನಿಂದ ಬಂದಿದ್ದರೆ, ಮೂವರು ಮೈಸೂರಿನಿಂದ ಬಂದವರಾಗಿದ್ದಾರೆ.