Friday, August 12, 2022

Latest Posts

ಚಾಮರಾಜನಗರ| ಆರ್‍ಎಸ್‍ಎಸ್ ನಿಂದ ಶ್ರೀಕಂಠಯ್ಯನವರಿಗೆ ಶ್ರದ್ಧಾoಜಲಿ

ಚಾಮರಾಜನಗರ: ಹಿರಿಯ ಆರ್‍ಎಸ್‍ಎಸ್ ಸ್ವಯಂ ಸೇವಕರಾಗಿದ್ದ ನಮ್ಮೆಲ್ಲರ ಮಾರ್ಗದರ್ಶಕರಾದ ಶ್ರೀಕಂಠಯ್ಯ ಅವರ ನಿಧನದಿಂದ ಹಿಂದು ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಆರ್‍ಎಸ್‍ಎಸ್‍ನ ಸಂಪರ್ಕ ಪ್ರಮುಖ್ ಎಚ್.ಎಸ್. ಗಂಗಾಧರ್ ಬಾವುಕರಾದರು.
ನಗರದ ಆರ್‍ಎಸ್‍ಎಸ್ ಕಾರ್ಯಾಲಯದಲ್ಲಿ ಇಂದು ಶ್ರೀಕಂಠಯ್ಯನವರ ನಿಧನದ ಗೌರವಾರ್ಥ ನಡೆದ ಶ್ರದ್ಧಾoಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಹಳಷ್ಟು ಮಂದಿ ಯುವಕರಿಗೆ ಶ್ರೀಕಂಠಯ್ಯ ಅವರು ಪ್ರೇರಣೆಯಾಗಿದ್ದಾರೆ. ಅವರು ತತ್ವ ಅಧರ್ಶಗಳು ನಮ್ಮೆಗೆಲ್ಲ ದಾರಿ ದೀಪವಾಗಿದೆ. ಅವರಲ್ಲಿದ್ದ ರಾಷ್ಟ್ರ ಪ್ರೇಮ, ಸ್ವದೇಶಿ ಕಲ್ಪನೆ, ದೇಶದ ಅಭಿವೃದ್ದಿಯಲ್ಲಿ ಹಿಂದೂಗಳ ಪಾತ್ರ ಮಹತ್ವ ಎಂಬುದನ್ನು ಸಾರಿ ಸಾರಿ ಹೇಳುತ್ತಿದ್ದರು. ಅವರು ಭೌತಿಕವಾಗಿ ನಮ್ಮೋಂದಿಗಿಲ್ಲ. ಅವರ ಮಾಡಿರುವ ಸೇವಾ ಕಾರ್ಯಗಳು ಗುರುತಿಸುತ್ತಿವೆ ಎಂದರು.
ಗಣಪತಿ ಮಂಡಲಿಯ ಮಾಜಿ ಅಧ್ಯಕ್ಷ ಹಾಗೂ ಗೌರವ ಕಾರ್ಯದರ್ಶಿ ಎಸ್. ಬಾಲಸುಬ್ರಮಣ್ಯ ಮಾತನಾಡಿ, ಶ್ರೀಕಂಠಯ್ಯ ಅವರು ನಗರಕ್ಕೆ ಒಂದು ಶಕ್ತಿಯಾಗಿದ್ದರು. ನಮ್ಮ ಯಾವುದೇ ಕಾರ್ಯಕ್ರಮಗಳಿಗೂ ಅವರ ಮಾರ್ಗದರ್ಶನ ಅತ್ಯವಶ್ಯಕವಾಗಿತ್ತು. ವಿದ್ಯಾಗಣಪತಿ ಮಂಡಲಿಯ ಅಧ್ಯಕ್ಷರಾಗಿಯಶಸ್ವಿಯಾಗಿ ಗಣೋತ್ಸವವನ್ನು ಮುನ್ನಡೆಸುತ್ತಿದ್ದರು. 1962ರಿಂದಲು ಸಕ್ರಿಯವಾಗಿ ಗಣಪತಿ ಮಂಡಲಿಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಸೇವೆ ಅವಿಸ್ಮರಣೀಯ. ಇಂಥವರು ನಾವು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಭಗವಂತ ಚಿರಾಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸಿಕೊಂಡರು.
ಅರ್‍ಎಸ್‍ಎಸ್ ಜಿಲ್ಲಾ ಪ್ರಚಾಕರ್ ಪ್ರಶಾಂತ್ ಮಾತನಾಡಿ, ಆರ್‍ಎಸ್‍ಎಸ್ ಸಂಘಟನೆಯು ಇಂಥ ಹಿರಿಯರ ಮಾರ್ಗದರ್ಶನ ಮತ್ತು ಅನುಭವದ ಮಾತುಗಳಿಂದ ಪ್ರೇರಣೆಗೊಂಡು ನಡೆಯುತ್ತಿದೆ. ಚಾಮರಾಜನಗರದದಲ್ಲಿ ಶ್ರೀಕಂಠಯ್ಯನವರ ಸೇವೆ ಅನನ್ಯವಾಗಿದೆ. ಅವರ ನಿಧನವು ಸಂಘಟನೆಗೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದರು.
ಸಭೆಯಲ್ಲಿ ವ್ಯವಸ್ಥಾ ಪ್ರಮುಖ್ ಚಿಕ್ಕರಾಜು, ಶ್ರೀಕಂಠಯ್ಯನವರ ಸಂಬಂಧಿ ಷಣ್ಮುಖ, ಚುಡಾ ಅಧ್ಯಕ್ಷ ಕುಲಗಾಣಶಾಂತಮೂರ್ತಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯಧರ್ಶಿ ನಾಗಶ್ರೀ ಪ್ರತಾಪ್, ನಗರ ಘಟಕದ ಅಧ್ಯಕ್ಷ ನಾಗರಾಜು, ಚಂದ್ರಶೇಖರ್, ಶಿವು ವಿರಾಟ್, ಸುಂದರರಾಜ್, ವೃಷಬೇಂದ್ರ್ಪ, ನಂದೀಶ್ ಮೂಡ್ಲುಪುರ, ವಿಎಚ್‍ಪಿ ಮಧು ಇತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss