Monday, August 8, 2022

Latest Posts

ಚಾಮರಾಜನಗರ| ಸಾಲಬಾಧೆಯಿಂದ ರೈತ ಆತ್ಮಹತ್ಯೆ

ಹೊಸದಿಗಂತ ವರದಿ, ಚಾಮರಾಜನಗರ:

ಸಾಲಬಾಧೆಯಿಂದ ರೈತನೊಬ್ಬ ಜಮೀನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೋಕಿನ ಜ್ಯೋತಿಗೌಡನಪುರ ದಲ್ಲಿ ಇಂದು ನಡೆದಿದೆ.
ಗ್ರಾಮದ ರೈತ ಶಿವಪ್ಪ 33 ವರ್ಷ ಆತ್ಮಹತ್ಯೆ ಮಾಡಿಕೊಂಡ ರೈತ ಈತ ತನ್ನ ಜಮೀನಿನಲ್ಲಿ ಪತ್ರ ಬೆಳೆದಿದ್ದ ಭತ್ತ ಕಟಾವು ಮಾಡಿ ಖರೀದಿ ಮಾಡಲು ಯಾರು ಬರಲಿಲ್ಲ ಎಂದು ಮನನೊಂದು ಜಮೀನಿನಲ್ಲಿಯೇ ವಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ರೈತ ಶಿವಪ್ಪ ಬ್ಯಾಂಕ್ ಹಾಗೂ ಖಾಸಗಿ ಲೇವಾದೇವಿಗಾರರಿಂದ 5 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದ ಎನ್ನಲಾಗಿದೆ ಭತ್ತ ಕಟಾವು ಮಾಡಿ ಡಿಸೆಂಬರ್ ತಿಂಗಳಿನಲ್ಲಿ ಸಾಲ ವಾಪಸ್ ನೀಡುವುದಾಗಿ ವಾಗ್ದಾನ ಮಾಡಿದ್ದ ಭತ್ತದ ಬೆಲೆ ಕುಸಿತದಿಂದ ಖರೀದಿದಾರರು ಭತ್ತ ಖರೀದಿಸಲು ಬಾರದ ಹಿನ್ನೆಲೆಯಲ್ಲಿ ಇಂದು ಸಾಯಂಕಾಲ ಹತಾಶೆಗೊಂಡು ಕ್ರಿಮಿನಾಶಕ ಸೇವಿಸಿ ಮೃತಪಟ್ಟಿದ್ದಾನೆ ರೈತನ ಶವವನ್ನು ಚಾಮರಾಜನಗರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಪರೀಕ್ಷೆಗೆ ಸಂಜೆ ತರಲಾಗಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss