Monday, August 8, 2022

Latest Posts

ಚಾಮರಾಜ ಕ್ಷೇತ್ರದಲ್ಲಿ ಮೂರು ಕಡೆ ಮೊಬೈಲ್ ಕೋವಿಡ್ ಪರೀಕ್ಷಾ ಕೇಂದ್ರಗಳ ಪ್ರಾರಂಭ: ಬಿಜೆಪಿ ಶಾಸಕ ಎಲ್.ನಾಗೇಂದ್ರ

ಮೈಸೂರು: ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಕೊರೋನಾ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಮೂರು ಮೊಬೈಲ್ ಕೋವಿಡ್ ಪರೀಕ್ಷಾ ಕೇಂದ್ರಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಬಿಜೆಪಿ ಶಾಸಕ ಎಲ್.ನಾಗೇಂದ್ರ ತಿಳಿಸಿದರು.
ಬುಧವಾರ ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಚಾಮರಾಜ ಕ್ಷೇತ್ರದ ಕೋವಿಡ್ ಟಾಸ್ಕ್ ಪೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೈಸೂರಿನ ಪುರಸಭೆ, ಹೆಬ್ಬಾಳಿನ ಸಿ.ಐ.ಟಿ.ಬಿ ಛತ್ರ ಮಾನಸಗಂಗೋತ್ರಿ ಓಪನ್ ಏರ್ ಥಿಯೇಟರ್ ಗಳಲ್ಲಿ ಕೋವಿಡ್ ಮೊಬೈಲ್ ಪರೀಕ್ಷಾ ಕೇಂದ್ರವನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಹೋಂ ಕ್ವಾರಂಟೈನ್ ನಲ್ಲಿರಿಸಲಾಗುವ ಸೋಂಕಿತರಿಗೆ, ಪರೀಕ್ಷಾ ಫಲಿತಾಂಶ ಬಂದ ೩ ಗಂಟೆಗಳ ಒಳಗಾಗಿ, ಅವರಿಗೆ ಅಗತ್ಯ ಔಷಧಿ, ಸಲಹೆ, ಸೂಚನೆಗಳನ್ನು ನುರಿತ ವೈದ್ಯರು ಮನೆಗೆ ತೆರಳಿ ನೀಡಲು ಕ್ರಮವಹಿಸಬೇಕು. ರೋಗದ ಲಕ್ಷಣ ಕಂಡುಬAದವರು ಸೂಕ್ತ ಸ್ಥಳದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು, ಅವರಿಗೆ ಮಾಹಿತಿ ನೀಡುವ ಸಲುವಾಗಿ ಪ್ರತಿನಿತ್ಯ ಮನೆಮನೆಗೆ ತೆರಳುವ ವಾಹನದಲ್ಲಿ ಧ್ವನಿವರ್ಧಕವನ್ನು ಅಳವಡಿಸಿ, ಸಮಗ್ರ ಪ್ರಚಾರ ಕೈಗೊಳ್ಳುವಂತೆ ಸೂಚಿಸಿದರು.
ವಿಕ್ರಾಂತ್ ಟೈರ್ಸನಎಲ್ಲಾ ಕಾರ್ಮಿಕರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸುವಂತೆ ಸಂಬAಧಿಸಿದವರಿಗೆ ª ಜಿಲ್ಲಾಧಿಕಾರಿಯವರಿಂದ ಕಟ್ಟುನಿಟ್ಟಿನ ಆದೇಶ ನೀಡುವಂತೆ ತಿಳಿಸಿದರು. ವಲಯವಾರು ವಾರ್ಡವಾರು ಅಧಿಕಾರಿಗಳಿಂದ ಈವರೆಗೆ ಕರೋನಾ ಸೋಂಕಿನ ನಿಯಂತ್ರಣಕ್ಕಾಗಿ ಕೈಗೊಂಡಿರುವ ಕ್ರಮಗಳ ಕುರಿತಂತೆ ಮಾಹಿತಿಯನ್ನು ಪಡೆದ ಸಮಿತಿಯು ಈ ರೋಗದ ನಿಯಂತ್ರಣಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳಾದ ಆಂಟಿಜೆನ್ ಟೆಸ್ಟ್ ಕೇಂದ್ರಗಳನ್ನು ವಲಯವಾರು ಪ್ರತಿ ನಿತ್ಯ ನಡೆಸಲು ಸ್ಥಳಗಳನ್ನು ಗುರುತಿಸುವಂತೆ ಸೂಚಿಸಿದರು.
ಶೀಘ್ರದಲ್ಲಿಯೇ ಕೆ.ಆರ್.ಎಸ್, ರಸ್ತೆಯಲ್ಲಿರುವ ಟ್ರಾಮಾ ಸೆಂಟರ್ ನಲ್ಲಿ ಲಭ್ಯವಿರುವ ಸುಮಾರು ೨೮೦ ಬೆಡ್ ಗಳನ್ನು ಮುಂದಿನ ನಾಲ್ಕೆöÊದು ದಿನಗಳಲ್ಲಿ ಸಜ್ಜುಗೊಳಿಸಲಿರುವುದಾಗಿ, ಸುಮಾರು ೪೦ ವೆಂಟಿಲೇರ್ ಹಾಗೂ ಆಕ್ಷಿಜನ್ ಸೌಲಭ್ಯವಿರುವುದಾಗಿ ಕೆ.ಆರ್. ಆಸ್ಪತ್ರೆಯಲ್ಲಿರುವ ಎಲ್ಲಾ ಕೋವಿಡ್ ಸೋಂಕಿತ ರೋಗಿಗಳನ್ನು ಅಲ್ಲಿಗೆ ಸ್ಥಳಾಂತರ ಮಾಡಲಿರುವುದಾಗಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು. ಒಟ್ಟಾರೆ ಎಲ್ಲಾ ವೈದ್ಯರು, ಅಧಿಕಾರಿಗಳು, ಕೊರೋನಾ ಸೋಂಕು ನಿವಾರಣೆಗಾಗಿ ಶ್ರಮಿಸುತ್ತಿರುವುದನ್ನು ಪ್ರಶಂಸಿದ ಸಮಿತಿಯು, ಮುಂದಿನ ದಿನಗಳಲ್ಲಿ ಮೈಸೂರಿನಾದ್ಯಂತ ಪ್ರತಿ ನಿತ್ಯ ಹೆಚ್ಚುಹೆಚ್ಚು ಕೋವಿಡ್ ಪರೀಕ್ಷೆಗಳನ್ನು ನಡೆಸಿ, ಸೋಂಕಿತರನ್ನು ಪತ್ತೆಹಚ್ಚಿ, ಅವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿ, ಪ್ರಾಣ ಹಾನಿಯಾಗುವದನ್ನು ತಡೆಯಲು ಶ್ರಮಿಸುವಂತೆ ತಿಳಿಸಲಾಯಿತು.
ಮೈಸೂರು ನಗರವನ್ನು ಕೊರೋನಾ ಮುಕ್ತವಾಗಿಸಲು ಶ್ರಮಿಸಬೇಕು. ಈ ಎಲ್ಲಾ ಕಾರ್ಯದಲ್ಲಿ ನಾನೂ ಸಹ ಹಗಲಿರುಳು ಶ್ರಮಿಸುತ್ತೇನೆಂದು ಶಾಸಕರು ತಿಳಿಸಿ, ಜಿಲ್ಲಾಧಿಕಾರಿಯವರ ಸಹಮತಿ ಮೇರೆಗೆ ಸಭೆಯನ್ನು ಮುಕ್ತಾಯಗೊಳಿಸಿದರು.
ಸಭೆಯಲ್ಲಿ ನಗರಪಾಲಿಕೆಯ ಸದಸ್ಯರಾದ ರವೀಂದ್ರ, ರಂಗಸ್ವಾಮಿ, ವೇದಾವತಿ, ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯ ಕಾರ್ಯದರ್ಶಿ ಬಿಳಿಗಿರಿ, ಉಪಾಯುಕ್ತರು, ಮಹಾನಗರ ಪಾಲಿಕೆಯ ವಲಯ ಆಯುಕ್ತರುಗಳು, ಅಧಿಕಾರಿಗಳು, ಟಾಸ್ಕ್ ಫೋರ್ಸ ಸಮಿತಿಯ ಸದಸ್ಯರುಗಳು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss