ಮೈಸೂರು: ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ವ್ಯಾಪಕವಾಗಿ ಕೊರೋನಾ ವೈರಾಣು ಸೋಂಕು ಹರಡುತ್ತಿರುವುದಕ್ಕೆ ಕಾರಣವಾಗುತ್ತಿರುವ ಸೋಂಕಿತರನ್ನು ಪತ್ತೆಹಚ್ಚಲು ರ್ಯಾಪಿಡ್ ಟೆಸ್ಟಿಂಗ್ಗೆ ಬಿಜೆಪಿ ಶಾಸಕ ಎಲ್.ನಾಗೇಂದ್ರ ಮಂಗಳವಾರ ಚಾಲನೆ ನೀಡಿದರು.
ಟಾಸ್ಕ್ ಫೋರ್ಸ್ ಸಮಿತಿಯ ತೀರ್ಮಾನದಂತೆ ನಗರಪಾಲಿಕೆಯ ವಾರ್ಡ್ ನಂ ೨೫ ರಲ್ಲಿನ ಪುಲಕೇಶಿ ರಸ್ತೆ ಕೈಲಾಸಪುರಂ ಸರ್ಕಾರಿ ಶಾಲೆಯಲ್ಲಿ ರ್ಯಾಪಿಡ್ ಟೆಸ್ಟಿಂಗ್ ಶಾಸಕ ಎಲ್.ನಾಗೇ೦ದ್ರ ರವರು, ಮೈಸೂರು ಮಹಾನಗರ ಪಾಲಿಕೆ ಸದಸ್ಯ ರಂಗಸ್ವಾಮಿ ಉಪಸ್ಥಿತಿಯಲ್ಲಿ ಚಾಲನೆ ನೀಡಿದರು. ಬಳಿಕ ಕೈಲಾಸಪುರಂ ತಿಲಕ್ ನಗರ ವ್ಯಾಪ್ತಿಯ ಸುಮಾರು ೨೦೦ ಶಂಕಿತರಿಗೆ Pಕೊರೋನಾ ಸೋಂಕಿನ ಪರೀಕ್ಷೆಯನ್ನು ನಡೆಸಲಾಯಿತು, ಈ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣಾಧಿಕಾರಿ ಡಾ:ವೆಂಕಟೇಶ್ , ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ:ಜಯಂತ್, Pಕೊರೋನಾ ಪರೀಕ್ಷಾ ಪರಿಣಿತ ೨ ತಂಡಗಳು ಭಾಗವಹಿಸಿದ್ದವು.