Saturday, August 13, 2022

Latest Posts

ಚಾಲಕನ ನಿಯಂತ್ರಣ ತಪ್ಪಿ ಭದ್ರಾ ನಾಲೆಗೆ ಉರುಳಿಬಿದ್ದ ಕಾರು: ಮಹಿಳೆ ಸಾವು

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ಕಾರೊಂದು ಭದ್ರಾ ನಾಲೆಗೆ ಉರುಳಿಬಿದ್ದ ಪರಿಣಾಮ ಮಹಿಳೆಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತರೀಕೆರೆ ತಾಲ್ಲೂಕು ಲಕ್ಕವಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.
ಸರ್ವಮಂಗಳ (32) ಎಂಬುವವರು ಮೃತಪಟ್ಟಿರುವ ದುರ್ದೈವಿ. ಅವರ ಪತಿ ಸಂತೋಷ್ ಜೈನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದಂಪತಿಗಳಿಬ್ಬರು ಸಂಬಂಧಿಕರ ಮನೆಗೆ ತೆರಳಿ ಲಕ್ಕವಳ್ಳಿಗೆ ವಾಪಾಸಾಗುವಾಗ ಭದ್ರಾ ಎಡದಂಡೆ ನಾಲೆಯ ತಿರುವಿನಲ್ಲಿ ನಿಯಂತ್ರಣ ತಪ್ಪಿದ್ದ ಕಾರು ನಾಲೆಗೆ ಉರುಳಿ ಬಿದ್ದಿದೆ.
ಅಣೆಕಟ್ಟೆಯಿಂದ ನಾಲೆಗೆ ನೀರನ್ನು ಬಿಟ್ಟಿರುವುದರಿಂದ ತುಂಬಿ ಹರಿಯುತ್ತಿರುವ ನಾಲೆಯಲ್ಲಿ ಕಾರು ಕೊಚ್ಚಿಕೊಂಡು ಸ್ವಲ್ಪ ದೂರಕ್ಕೆ ಹೋಗಿದೆ. ಈ ವೇಳೆ ಕಾರಿನಿಂದ ಹೊರಬಂದ ಸಂತೋಷ್ ಜೈನ್ ಈಜಿ ದಡ ಸೇರಿದರೆ, ಪತ್ನಿ ಸರ್ವಮಂಗಳ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಸರ್ವಮಂಗಳ ಅವರ ಮೃತ ದೇಹವನ್ನು ಮುಳುಗು ತಜ್ಞರು ಒಂದು ಗಂಟೆಗೂ ಹೆಚ್ಚು ಹಾಕ ಹುಡುಕಾಟ ನಡೆಸಿ ಹೊರತಂದಿದ್ದಾರೆ. ಘಟನೆ ಸಂಬಂಧ ಲಕ್ಕವಳ್ಳಿ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss