ಚಿತ್ರದುರ್ಗ: ಖಾಸಗಿ ಬಸ್ ಒಂದಕ್ಕೆ ಬೆಂಕಿ ತಗುಲಿದ್ದು, ಇಬ್ಬರು ಮಕ್ಕಳು ಸೇರಿದಂತೆ ಐದು ಜನ ಸಜೀವ ದಹನವಾಗಿದ್ದಾರೆ. ಈ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೆಆರ್ಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರೆ ೪ರಲ್ಲಿ ಸಂಭವಿಸಿದೆ.
ವಿಜಯಪುರದಿಂದ ಚಿತ್ರದುರ್ಗ ಮಾರ್ಗವಾಗಿ ಬಸ್ ತೆರಳುತ್ತಿತ್ತು. ಬಸ್ನಲ್ಲಿ ೩೨ ಪ್ರಯಾಣಿಕರಿದ್ದರು. ಬಸ್ನ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಕರು ಚಾಲಕನಿಗೆ ಕೂಗಿ ಕೂಗಿ ಹೇಳಿದರೂ ಚಾಲಕ ಅದನ್ನು ನಿರ್ಲಕ್ಷಿಸಿದ್ದಾನೆ. ನಂತರ ಬೆಂಕಿ ಇಡೀ ಬಸ್ನ್ನು ವ್ಯಾಪಿಸಿದೆ. ಆಗ ಚಾಲಕ ಬಸ್ನಿಂದ ಹಾರಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಬೆಂಕಿ ಕಾಣಿಸಿಕೊಂಡಾಗ ಕೆಲವೊಂದಿಷ್ಟು ಜನ ಬಸ್ನಿಂದ ಸುರಕ್ಷಿತವಾಗಿ ಹೊರಬಂದಿದ್ದಾರೆ. ಹೊರಬರಲಾಗದೇ ಬಸ್ನಲ್ಲಿಯೇ ಸಿಕ್ಕಿಕೊಂಡವರಲ್ಲಿ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ಮಕ್ಕಳು, ಓರ್ವ ಮಹಿಳೆ ಸೇರಿದಂತೆ ಐವರು ಸಜೀವ ದಹನವಾಗಿದ್ದಾರೆ. ಮೃತರನ್ನು ಶೀಲಾ (33) ಸ್ಪರ್ಶಾ (8) ಸಮೃದ್ಧ (5) ಕವಿತಾ (29) ನಿಶ್ಚಿತಾ (3) ಎಂದು ಗುರುತಿಸಲಾಗಿದೆ.
ಈ ಘಟನೆ ಸಂಭವಿಸಿದ ತಕ್ಷಣ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಿರಿಯೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.