ಹೊಸದಿಗಂತ ವರದಿ ಧಾರವಾಡ:
ಬೆಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡ ಪೊಲೀಸರಿಗೆ ಚೆಳ್ಳೆಹಣ್ಣು ತಿನಿಸಿ, ಕಳ್ಳತನ ಮಾಡುತ್ತಿದ್ದ, ಇಬ್ಬರು ಸಹೋದರರನ್ನು ಸಿಸಿಬಿ ಪೊಲೀಸರು ಹಿಡಿಯುವಲ್ಲಿ ಯಶ ಕಂಡಿದ್ದಾರೆ.
ಉಣಕಲ್ ಸಿದ್ಧರಾಮೇಶ್ವರ ನಗರದ ನಿವಾಸಿಗಾಳಾದ ಹಸನಸಾಬ ಹಾಗೂ ಆಶಿಫ್ ಸಾಬ್ ಬಂಧಿತ ಖದೀಮ ಸಹೋದರರು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಹಾಗೂ ಸಿಸಿಆರ್ ಬಿ ಪೊಲೀಸರು ಖೆಡ್ಡಾಕ್ಕೆ ಕೆಡಿವಿದ್ದಾರೆ.
ಇಬ್ಬರು ಸಹೋದರರು ಕಳ್ಳತನ ವೃತ್ತಿಯಾಗಿಸಿಕೊಂಡು ರಾಜ್ಯದ ಹಲವಡೆ ತಮ್ಮ ಕೈಚಳಕ ತೋರಿಸಿದ್ದಾರೆ. ಬಂಧಿತರಿಂದ ಕಳ್ಳತನ ಮಾಡಿದ ಒಟ್ಟು 10 ಗ್ರಾಂ ಬಂಗಾರ, ಮೂರು ಬೈಕ್, ಎರಡು ಮೊಬೈಲ್, ಕಳ್ಳತನಕ್ಕೆ ಬಳಸಿದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ದಾಳಿಯಲ್ಲಿ ಸಿಸಿಬಿ ಇನ್ಸಪೆಕ್ಟರ್ ಅಲ್ತಾಫ್ ಮುಲ್ಲಾ, ಸಿಸಿಆರ್ ಬಿ ಇನ್ಸಪೆಕ್ಟರ್ ಭರತ್ ರೆಡ್ಡಿ, ಸಿಬ್ಬಂದಿ ಶಿವರಾಜ ಸಾಳೋಂಕೆ, ಗುಂಜಾಳ, ಇಚ್ಚಂಗಿ ಸೇರಿದಂತೆ ಅನೇಕರು ಇದ್ದರು.