ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಚಿಂದಿ ಆಯುತ್ತಿದ್ದ ಬಡ ಹುಡುಗನ ಹೆಜ್ಜೆಯೀಗ ವೈದ್ಯಕೀಯ ರಂಗದೆಡೆಗೆ!

ಲಕ್ನೋ: ಪ್ರತಿಭೆಗೆ ಬಡತನವಿಲ್ಲ. ಮನಸ್ಸಿಟ್ಟು ,ಪ್ರಯತ್ನಪಟ್ಟು ಯಾವುದಾದರೂ ಗುರಿಯೆಡೆಗೆ ನಡೆದಾಗ ಯಶಸ್ಸು ಕಟ್ಟಿಟ್ಟ ಬುತ್ತಿ. ಇದಕ್ಕೆ ನೇರ ಸಾಕ್ಷಿ ಚಿಂದಿ ಆಯ್ದು ಬದುಕಿನ ಬಂಡಿ ಎಳೆಯುವ ಬಡ ಕುಟುಂಬದ ಹುಡುಗ ಅರವಿಂದ್ ಕುಮಾರ್.
ಚಿಂದಿ ಆಯುವುದೇ ವೃತ್ತಿಯಾದ್ದರಿಂದ ಅನೇಕರಿಂದ ತಾತ್ಸಾರಕ್ಕೊಳಗಾಗಿದ್ದ , ಇದೇ ಕಾರಣಕ್ಕೆ ಊರನ್ನೇ ತೊರೆಯಬೇಕಾದ ಸನ್ನಿವೇಶವನ್ನೂ ಎದುರಿಸಿದ್ದ ಈ ಕುಟುಂಬದ ಆಶಾಕಿರಣ ಅರವಿಂದ್ ನೀಟ್ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ )ಪಾಸ್ ಆಗುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಅಪಮಾನಿಸಿದವರಿಗೆ ಶೈಕ್ಷಣಿಕ ಸಾಧನೆ ಮೂಲಕ ಸರಿಯಾಗೇ ಉತ್ತರಿಸಿದ್ದಾರೆ.
ಇದುವರೆಗೆ ೮ಬಾರಿ ನೀಟ್ ಪರೀಕ್ಷೆ ಬರೆದಿದ್ದರೂ ಸೂಕ್ತ ಫಲಿತಾಂಶ ಸಿಕ್ಕಿರಲಿಲ್ಲ. ಇದೀಗ 9ನೇ ಪ್ರಯತ್ನದಲ್ಲಿ ತೇರ್ಗಡೆಯಾಗಿ ಸಾಧನೆ ಮೆರೆದಿದ್ದಾರೆ. ಅಂದ ಹಾಗೆ ಯಾವುದೇ ತರಬೇತಿ ಸೌಲಭ್ಯ, ಅನುಕೂಲಗಳಿಲ್ಲದೆಯೇ ಈ ಬಡ ಹುಡುಗ ಪರೀಕ್ಷೆ ಪಾಸ್ ಮಾಡಿರುವುದು ಸಾಧನೆಯೇ.
ಅರವಿಂದ್ ತಂದೆ ಓದಿದ್ದು ಬರೇ 5ನೇ ತರಗತಿ. ತಾಯಿ ಶಾಲೆಯ ಮೆಟ್ಟಿಲು ತುಳಿದವರಲ್ಲ. ಕಷ್ಟದ ನಡುವೆಯೂ ಹೆತ್ತವರು ಮಗನನ್ನು ಎಸೆಸ್ಸೆಲ್ಸಿವರೆಗೆ ಓದಿಸಿದ್ದರು. ನಂತರ ಪಿಯುಸಿಯಲ್ಲಿ 60ಶೇಕಡಾ ಅಂಕಗಳು ಬಂದವು. ಬಡಜನರ ಸೇವೆ ಮಾಡಲು ತಾನೋರ್ವ ಎಲುಬು ತಜ್ಞನಾಗಬೇಕೆಂಬುದು ಅರವಿಂದ್ ಕನಸಾಗಿತ್ತು. ಕನಸು ನನಸಾಗಿಸುವ ಯತ್ನವಾಗಿ ನೀಟ್ ಪರೀಕ್ಷೆ ಎದುರಿಸಿದರು. ಉತ್ತೀರ್ಣರೂ ಆದರು. ಇನ್ನೀಗ ವೈದ್ಯಕೀಯ ಶಿಕ್ಷಣ ರಂಗದತ್ತ ಅರವಿಂದ್ ಹೆಜ್ಜೆ ಹಾಕತೊಡಗಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss