Friday, August 19, 2022

Latest Posts

ಚಿಕನ್ ಕತ್ತರಿಸುವ ಚಾಕುವಿನಲ್ಲಿತ್ತು ಬರ್ಡ್ ಫ್ಲೂ ವೈರಸ್: ಅಂಗಡಿ ಕ್ಲೋಸ್!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೊರೋನಾ ಭೀತಿ ನಡುವೆ ಇದೀಗ ಹಕ್ಕಿ ಜ್ವರ ಜನ ನಿದ್ದೆ ಕೆಡಿಸಿದೆ. ಈ ಮಧ್ಯೆ ಇಂದೋರ್‌ನ ಚಿಕನ್ ಶಾಪ್‌ಗಳ ಮೂರು ಚಾಕುವಿನಲ್ಲಿ ಬರ್ಡ್ ಫ್ಲೂ ವೈರಸ್ ಕಂಡುಬಂದಿದೆ.
ಇಂದೋರ್‌ನ ಆಜಾದ್ ನಗರದ 17 ಶಾಪ್‌ಗಳಲ್ಲಿ ಮಾಂಸ, ಜೀವಂತ ಕೋಳಿ ಹಾಗೂ ಮೊಟ್ಟೆಗಳನ್ನು ವಶಕ್ಕೆ ಪಡೆಯಲಾಗಿದೆ.
ಈಗಾಗಲೇ ಇಂದೋರ್‌ನಲ್ಲಿ 250  ಕಾಗೆಗಳು ಮೃತಪಟ್ಟಿವೆ. ಅದರ ಜೊತೆಯಲ್ಲೇ ಚಾಕುವಿನಲ್ಲಿ ವೈರಸ್ ಕಾಣಿಸಿರುವುದು ಜನರನ್ನು ಆತಂಕಕ್ಕೀಡುಮಾಡಿದೆ.
ವಶಕ್ಕೆ ಪಡೆದಿರುವ ಕೋಳಿಗಳನ್ನು ಕೊಂದು ಹೂತುಹಾಕಲಾಗಿದೆ. ಸುಮಾರು ಒಂದು ಕಿ.ಮೀ ವ್ಯಾಪ್ತಿಯಲ್ಲಿ ಬರುವ ಚಿಕನ್ ಶಾಪ್‌ಗಳನ್ನು ಮುಚ್ಚಿಸಿ ಸ್ಯಾನಿಟೈಸ್ ಮಾಡಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!