Sunday, July 3, 2022

Latest Posts

ಚಿಕನ್ ಕತ್ತರಿಸುವ ಚಾಕುವಿನಿಂದ ಯುವಕನ ಬರ್ಬರ ಹತ್ಯೆ

ಹೊಸದಿಗಂತ ವರದಿ,ವಿಜಯಪುರ:

ಹಾಡ ಹಗಲೇ ಯುವಕನೊಬ್ಬನನ್ನು ಚಿಕನ್ ಕತ್ತರಿಸುವ ಚಾಕುವಿನಿಂದ ಬರ್ಬರವಾಗಿ ಹತ್ಯೆ ಮಾಡಿದ ಘಟ‌ನೆ ವಿಜಯಪುರ ತಾಲೂಕಿನ ಖತಿಜಾಪುರ ಗ್ರಾಮದಲ್ಲಿ ಶನಿವಾರ ನಡೆದಿದೆ.

ಮೃತಪಟ್ಟವನನ್ನು ಇಸ್ಮಾಯಿಲ್ ಮುಲ್ಲಾ (22) ಎಂದು ಗುರುತಿಸಲಾಗಿದೆ. ಇಸ್ಮಾಯಿಲ್ ಮುಲ್ಲಾ ಈತನ ತಾಯಿಗೆ ಚಿಕನ್ ಅಂಗಡಿಯ ಆರೋಪಿ ಖಾಜಲ್ ಬೇಪಾರಿ ಅವಾಚ್ಯವಾಗಿ ಬೈದಿರುವ ಕುರಿತು ಕೇಳಿದಕ್ಕೆ, ಚಿಕನ್ ಕತ್ತರಿಸುವ ಚಾಕುವಿನಿಂದ ಎದೆಯ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾನೆ.

ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ ಐ ಆನಂದ ಠಕ್ಕಣವರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss