Tuesday, August 16, 2022

Latest Posts

ಚಿಕಿತ್ಸೆ ಕೊಡುವವರನ್ನೂ ಕಾಡುತ್ತಿದೆ ಕೊರೋನಾ: ಶ್ರೀನಗರದ ಐದು ವೈದ್ಯರ ವರದಿ ಪಾಸಿಟಿವ್

ಶ್ರೀನಗರ: ಕಾಶ್ಮೀರದಲ್ಲಿ ವೈದ್ಯರಿಗೆ ಕೊರೋನಾ ತಪಾಸಣೆ ನಡೆಸಲಾಗಿದ್ದು ಐದು ವೈದ್ಯರ ವರದಿ ಪಾಸಿಟಿವ್ ಬಂದಿದೆ.
ಶ್ರೀನಗರ ಶ್ರೀ ಮಹಾರಾಜ ಹರಿ ಸಿಂಗ್ ಆಸ್ಪತ್ರೆಯ ಇಎನ್ ಟಿ ವಿಭಾಗದ 3 ವೈದ್ಯರಿಗೆ ಹಾಗೂ ಆರ್ಥೋಪೆಡಿಕ್ ಸರ್ಜನ್ ಮತ್ತು ಡೆಂಟಿಸ್ಟ್ ಒಬ್ಬರಿಗೆ ಕೊರೊನಾ ತಗುಲಿದೆ.ಈ ಪೈಕಿ ನಾಲ್ಕು ವೈದ್ಯರು ಭಾನುವಾರ ಕೊರೋನಾದಿಂದ ಸಾವನಪ್ಪಿದ್ದ ರೋಗಿಗೆ ಚಿಕಿತ್ಸೆ ನೀಡಿದ್ದರು. ಈ ಹಿಂದೆ ಇಎನ್ ಟಿ ಸರ್ಜನ್ ಬಳಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಪೂರೈಸಿದ ಬಳಿಕ ಕೊರೋನಾ ಇರುವುದು ಗೊತ್ತಾಗಿದೆ. 29 ವರ್ಷದ ಮಹಿಳೆಯಿಂದ ವೈದ್ಯರಿಗೆ ತಗುಲಿದ್ದು ವೈದ್ಯರಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಜಮ್ಮು ಮತ್ತು ಕಾಶ್ಮೀರ ದಲ್ಲಿ ಒಟ್ಟು 1188 ಜನರಿಗೆ ಕೊರೊನಾ ತಗುಲಿದ್ದು ಈ ಪೈಕಿ 13 ವೈದ್ಯರು ಹಾಗೂ 3 ದಾದಿಯರಿಗೂ ಕೊರೋನಾ ಪಾಸಿಟಿವ್ ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss