Thursday, August 18, 2022

Latest Posts

ಚಿಕ್ಕಬಳ್ಳಾಪುರಕ್ಕೆ ಕಂಟಕವಾದ ಮಹಾರಾಷ್ಟ ವಲಸಿಗರು: ಇಂದು ಒಂದೇ ದಿನ 45 ಜನಕ್ಕೆ ಸೊಂಕು

ಚಿಕ್ಕಬಳ್ಳಾಪುರ: ಮಹಾರಾಷ್ಟದಿಂದ ಚಿಕ್ಕಬಳ್ಳಾಪುರಕ್ಕೆ ಬಂದಿದ್ದ 45 ಜನಕ್ಕೆ ಸೊಂಕು ದೃಢವಾಗಿದೆ.

ಮೆ.20 ರಂದು ಮಹಾರಾಷ್ಟದಿಂದ ಚಿಕ್ಕಬಳ್ಳಾಪುರಕ್ಕೆ 250 ವಲಸಿಗರನ್ನು ಕರೆತರಲಾಗಿತ್ತು. ಇವರನ್ನು ಕ್ವಾರಂಟೈನ್ ಮಾಡಿ ಪರೀಕ್ಷೆ ಒಳಪಡಿಸಲಾಗಿತ್ತು. ಗುರುವಾರ 6 ಜನ ಸೊಂಕಿರರು ಪತ್ತೆಯಾಗಿದ್ದು, ಶುಕ್ರವಾರ ಬರೊಬ್ಬರಿ 45 ಜನಕ್ಕೆ ಸೊಂಕು ದೃಢವಾಗಿರುವುದು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ.

ಇನ್ನೂ ಎಷ್ಟು ಜನರಿಗೆ ಸೊಂಕಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದ್ದು ಸದ್ಯಕ್ಕೆ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 71ಕ್ಕೆ ಏರಿಕೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!