Sunday, June 26, 2022

Latest Posts

ಚಿಕ್ಕಬಳ್ಳಾಪುರ: ಬಾರ್ ನಲ್ಲಿ ಕಿಂಡಿ ಕೊರೆದು ಮದ್ಯ ಕದ್ದ ಕುಡುಕರು

ಚಿಕ್ಕಬಳ್ಳಾಪುರ: ನಗರ ಹೊರವಲಯದ ಗೋಲ್ಡನ್ ಬಾರ್ ಅಂಡ್ ರೆಸ್ಟೋರೆಂಟ್‍ಗೆ ಕಿಂಡಿ ಕೊರೆದು ಮದ್ಯ ಕಳವು ಮಾಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ಬಾರ್ ಅಂಡ್ ರೆಸ್ಟೋರೆಂಟ್‍ನ ಸಿಸಿಟಿವಿ ಕ್ಯಾಮೆರಾ ಧ್ವಂಸಗೊಳಿಸಿರುವ ಖದೀಮರು, ಬಾರ್ ಹಿಂಭಾಗದಲ್ಲಿ ಗೋಡೆಗೆ ಕಿಂಡಿಕೊರೆದು ಮದ್ಯ ಕಳವು ಮಾಡಿದ್ದಾರೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ವೃತ್ತ ನಿರೀಕ್ಷಕ ಸುದರ್ಶನ್ ಹಾಗೂ ನಂದಿಗಿರಿಧಾಮ ಪಿಎಸ್‍ಐ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಲಾಕ್‍ಡೌನ್ ಹಿನ್ನಲೆ ಮದ್ಯದಂಗಡಿಗಳಿಗೆ ಬೀಗ ಹಾಕಲಾಗಿದ್ದು, ಜಿಲ್ಲೆಯಲ್ಲಿ ಮದ್ಯದಂಗಡಿಗಳ ಕಳ್ಳತನ ಮುಂದುವರಿದಿದೆ. ಏ. 15ರಂದು ಚಿಕ್ಕಬಳ್ಳಾಪುರ ನಗರದ  ಬಾರ್ ಗೋಡೆ ಕೊರೆದು ಮದ್ಯ ಕಳವು ಮಾಡಲಾಗಿತ್ತು. ನಂತರ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವೈ ಹುಣಸೇನಹಳ್ಳಿ ಹಾಗೂ ಜೆ ವೆಂಕಟಾಪುರದ ಬಳಿಯ ಬಾರ್‌ಗಳಲ್ಲೂ ಕಳ್ಳತನ ಮಾಡಲಾಗಿತ್ತು. ಈಗ ರಂಗಸ್ವಾಮಿ ಎಂಬವರಿಗೆ ಸೇರಿದ ಗೋಲ್ಡನ್ ಬಾರ್ ನಲ್ಲಿ ಮದ್ಯ ಕಳವು ಮಾಡಲಾಗಿದೆ.

ಮದ್ಯ ಸಿಗದೆ ಕಂಗಲಾದ ಮದ್ಯಪ್ರಿಯರು ಕಳ್ಳತನ ಮಾಡಿದರೆ ಅಥವಾ ಲಾಕ್‍ಡೌನ್ ನಡುವೆ ಒಂದಕ್ಕೆ ಹತ್ತು ಪಟ್ಟು ಬೆಲೆಗೆ ಮಾರಾಟ ಮಾಡಿ ದುಡ್ಡು ಮಾಡೋಕೆ ಕಿಡಿಗೇಡಿಗಳು ಸಂಚು ಹೂಡಿ ಕಳವು ಮಾಡಿದರೆ ಎಂಬ ಅನುಮಾನ ಮೂಡಿದೆ.

ಅಂದಹಾಗೆ ಲಾಕ್‍ಡೌನ್ ನಡುವೆ ಬಾರ್‌ಗಳು ಮುಚ್ಚಿದರೂ 100 ರೂ. ಮದ್ಯವನ್ನು 1,000 ರೂ.ಗೆ ಅಕ್ರಮವಾಗಿ ಕದ್ದು ಮುಚ್ಚಿ ಮಾರಾಟ ಮಾಡಿದ್ದ ಘಟನೆ ಇದೇ ನಂದಿಗಿರಿಧಾಮ ಪೊಲೀಸರು ಠಾಣಾ ವ್ಯಾಪ್ತಿಯಲ್ಲಿ  ಇತ್ತೀಚಿಗಷ್ಟೇ ನಡೆದಿತ್ತು. ಇದರಿಂದ ಮದ್ಯ ಕಳವಿನ ಬಗ್ಗೆ ಹಲವು ಅನುಮಾನಗಳು ಮೂಡಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss