Tuesday, August 16, 2022

Latest Posts

ಚಿಕ್ಕಬಳ್ಳಾಪುರ| ಜನರ ಜೀವನ ಮುಂದುವರೆಯಲು ಲಾಕ್ ಡೌನ್ ಸಡಿಲ ಮಾಡಲಾಗಿದೆ: ಸಚಿವ ಸುಧಾಕರ್

ಚಿಕ್ಕಬಳ್ಳಾಪುರ: ಜನರ ಜೀವ ಉಳಿಸುವ ಉದ್ದೇಶದಿಂದ ಕಳೆದ ಎರಡು ತಿಂಗಳಿಂದ ಲಾಕ್ಡೌನ್ ಮಾಡಲಾಗಿತ್ತು. ಜನ ಜೀವನ ಮುಂದುವರೆಸಬೇಕಾಗಿರುವುದರಿಂದ ಇದೀಗ ಲಾಕ್ ಡೌನ್ ಸಡಿಲು ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಚಿಕ್ಕಬಳ್ಳಾಪುರದಲ್ಲಿ ವಿವಿಧ ನರೇಗಾ ಕಾಮಗಾರಿಗಳು ಹಾಗೂ ಅಂತರ್ಜಲ ಚೇತನ ಕಾರ್ಯಕ್ರಮದಲ್ಲಿ‌ ಅವರು ಮಾತನಾಡಿದರು.

ಸರ್ಕಾರದ ಜವಾಬ್ದಾರಿ ಜೊತೆಗೆ ಜನರು ಕೂಡ ಸಹಭಾಗಿಗಳಾಗಿ ಮಾರ್ಗಸೂಚಿಗಳನ್ನು ಪಾಲಿಸಿ ಕೊರೋನಾ ವೈರಸ್ ತಡೆಗಟ್ಟಲು ಸಹಕರಿಸಬೇಕು. ಕೊರೋನಾ ನಿಯಂತ್ರಣಕ್ಕೆ ಸರ್ಕಾರ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದೆ. ಈಗಾಗಲೇ ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ ಒಂದು ಲಕ್ಷ ಹಾಸಿಗೆಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈಗಾಗಲೇ ವೈದ್ಯರಿಗೆ ಆನ್ಲೈನ್ ತರಬೇತಿ ನೀಡಲಾಗಿದೆ ಎಂದರು.

ರಾಜ್ಯದಲ್ಲಿ ಇಂದಿನಿಂದ ಸಾರಿಗೆ ವ್ಯವಸ್ಥೆ ಪುನರ್ ಆರಂಭವಾಗಿದ್ದು, ಬಸ್ ಗಳಲ್ಲಿ ಪ್ರಯಾಣಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss