Monday, August 8, 2022

Latest Posts

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭಾನುವಾರ 6 ಕೊರೋನಾ ಪ್ರಕರಣ ದೃಢ

ಶಿಡ್ಲಘಟ್ಟ: ತಾಲ್ಲೂಕಿನಲ್ಲಿ ಭಾನುವಾರ ಆರು ಕೊರೊನಾ ಪ್ರಕರಣಗಳು ದಾಖಲಾಗಿವೆ. ತಾಲ್ಲೂಕಿನ ಕೊತ್ತನೂರು ಗ್ರಾಮದ ಬಾಣಂತಿ ಮತ್ತು ಗಂಜಿಗುಂಟೆ ಪಂಚಾುತಿಯ ಮಾದೇನಹಳ್ಳಿಯ ಯುವಕನೋರ್ವ ಕೊರೊನಾ ಪಾಸಿಟೀವ್ ಎಂದು ತಿಳಿದು ಬಂದಿದೆ.
ತಾಲ್ಲೂಕಿನ ಜಂಗಮಕೋಟೆ ಗ್ರಾಮದಲ್ಲಿ ಮೂರು ಕೊರೋನಾ ಪ್ರಕರಣಗಳು ದಾಖಲಾಗಿದ್ದು, ಶಿಡ್ಲಘಟ್ಟ ನಗರದ ಹಳೆ ಪೋಸ್ಟ್ ಆಫೀಸ್ ರಸ್ತೆಯಲ್ಲಿ 68 ವರ್ಷದ ಕ್ಯಾನ್ನರ್ ಪೀಡಿತ ಮಹಿಳೆಗೆ ಕೊರೋನಾ ದೃಢಪಟ್ಟಿದೆ.
ಚಾಮರಾಜಪೇಟೆಯ ಶಂಕರ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಒಳಪಟ್ಟ ಸಂದರ್ಭದಲ್ಲಿ ಮಹಿಳೆಗೆ ಕೊರೊನಾ ಇರುವುದು ದೃಢವಾಗಿದೆ.
ಕೊರೊನಾ ಪ್ರಕರಣಗಳು ಇರುವ ಸ್ಥಳಗಳಲ್ಲಿ ಸುತ್ತ ಮುತ್ತ ಸೀಲ್ ಡೌನ್ ಮಾಡಲಾಗಿದ್ದು, ಕೊರೊನಾ ಪ್ರಕರಣಗಳು ಕಂಡು ಬಂದವರ ಸಂಪರ್ಕದಲ್ಲಿ ಇರುವವರನ್ನು ಹೋಂ ಕ್ವಾರಂಟೆನ್ ಮಾಡಲಾಗಿದೆ. ಅವರ ಗಂಟಲು ದ್ರವ ಪರೀಕ್ಷೆಗೆ ತೆಗೆದುಕೊಳ್ಳಲಾಗಿದೆ.
ಕೊರೊನಾ ಪ್ರಕರಣಗಳು ದಾಖಲಾದ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಆ ಪ್ರದೇಶಗಳಲ್ಲಿ ಕ್ರಿಮಿನಾಶಕ ಔಷಧಿ ಸಿಂಪಡಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss