Tuesday, June 28, 2022

Latest Posts

ಚಿಕ್ಕಬಳ್ಳಾಪುರ| ಶಿಡ್ಲಘಟ್ಟ ಪಿಎಸ್ಐಗೆ ಕೊರೋನಾ ಸೋಂಕು ದೃಢ, ಸಚಿವೆ, ಡಿಸಿಗೆ ಆತಂಕ

ಚಿಕ್ಕಬಳ್ಳಾಪುರ: ನಿನ್ನೆಯಷ್ಟೇ ಸಚಿವೆ ಶಶಿಕಲಾ ಜೊಲ್ಲೆ, ಡಿಸಿ ಆರ್. ಲತಾ ಎಸ್ಪಿ ಸೇರಿದಂತೆ ಹಲವು ಅಧಿಕಾರಿಗಳಿಗಳು ಶಿಡ್ಲಘಟ್ಟ ತಾಲ್ಲೂಕಿನ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದರು. ಅವರಿಗೆ ಭದ್ರತೆ ನೀಡಿದ್ದ ಶಿಡ್ಲಘಟ್ಟ ಪಿಎಸ್ಐಗೆ ಶನಿವಾರ ಕೊರೋನಾ ಸೋಂಕು ದೃಢವಾಗಿರುವ ಹಿನ್ನೆಲೆ ಸಚಿವೆ, ಡಿಸಿ, ಎಸ್ಪಿಗೆ ಆತಂಕ ಶುರುವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಗೆ ಕೋರೋನಾ ಸೋಂಕು ದೃಢವಾದ ಹಿನ್ನೆಲೆ ಸಚಿವೆ ಶಶಿಕಲಾ ಜೊಲ್ಲೆ ಚಿಕ್ಕಬಳ್ಳಾಪುರ ಡಿಸಿ ಆರ್ ಲತಾ. ಎಸ್ಪಿ ಮಿಥುನ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳಿಗೆ ಢವ ಢವ ಶುರುವಾಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಚಿಕ್ಕಬಳ್ಳಾಪುರ ಡಿಸಿ ಆರ್ ಲತಾ, ಎಸ್ಪಿ ಮಿಥುನ್ ಕುಮಾರ್ ಶುಕ್ರವಾರ ಶಿಡ್ಲಘಟ್ಟ ತಾಲ್ಲೂಕಿನ ಹಲವು ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಕೊರೋನಾ ಸೋಂಕಿತ ಶಿಡ್ಲಘಟ್ಟ ಗ್ರಾಮಾಂತರ ಠಾಣೆಯ ಪಿಎಸ್ಐ ಅವರ ಜೊತೆಯಲ್ಲೇ ಇದ್ದರು. ಇದರಿಂದ ಸಚಿವೆ ಶಶಿಕಲಾ ಜೊಲ್ಲೆ, ಜಿಲ್ಲಾಧಿಕಾರಿ ಆರ್ ಲತಾ. ಎಸ್ಪಿ ಮಿಥುನ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಪ್ರಾಥಮಿಕ ಸಂಪರ್ಕಿಗಳಾಗಿದ್ದಾರೆ. ಇದರಿಂದ ಅವರಿಗೆಲ್ಲಾ ಆತಂಕ‌ ಶುರುವಾಗಿದೆ.
ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪಿ.ಎಸ್ಐ ಗೆ ಶನಿವಾರ ಕೋರೋನಾ ಸೋಂಕು ದೃಢವಾಗುತ್ತಿದ್ದಂತೆ ಸೋಂಕಿತ ಪಿಎಸ್ಐ ವಾಸವಿದ್ದ ಶಿಡ್ಲಘಟ್ಟ ನಗರದ ಕನಕನಗರ ಹಾಗೂ ಆತ ಕರ್ತವ್ಯ ನಿರ್ವಹಿಸುತ್ತಿದ್ದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ಸಹ ಸೀಲ್ ಡೌನ್ ಮಾಡಲಾಗಿದೆ. ಆತನ ಕುಟುಂಬಸ್ಥರು. ಠಾಣೆಯ ಸಿಬ್ಬಂದಿಗೆ ಕ್ವಾರಂಟೈನ್ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss