Thursday, August 18, 2022

Latest Posts

ಚಿಕ್ಕಬಳ್ಳಾಪುರ| ಸೋಂಕಿತ ಯುವಕನೊಂದಿಗೆ ಪಾರ್ಟಿ: 16 ಮಂದಿ ಕ್ವಾರಂಟೈನ್

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿಗೂ ಕೊರೋನಾ ವ್ಯಾಪಿಸಿದ್ದು, ಸೊಂಕಿತನೊಂದಿಗೆ ಪಾರ್ಟಿ ಮಾಡಿದ್ದವರನ್ನೂ ಕ್ವಾರಂಟೈನ್ ಮಾಡಲಾಗಿದೆ.
ಜಿಲ್ಲೆಯ ಶಿಡ್ಲಘಟ್ಟ ತಾಲೂಕಿಗೆ ಕೋಲಾರದ ಕೊರೊನಾ ನಂಟು ಅಂಟಿದೆ. ಕೋಲಾರದ ಮಾಲೂರಿನಲ್ಲಿ ವಾಸವಾಗಿದ್ದ ಶಿಡ್ಲಘಟ್ಟ ತಾಲೂಕು ಮಳ್ಳೂರು ಗ್ರಾಮದ 27 ವರ್ಷದ ಯುವಕನಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.
ಮೂಲತಃ ಚಾಲಕನಾಗಿದ್ದ ಸೋಂಕಿತ ಕಳೆದ ಶನಿವಾರ ಸ್ವಗ್ರಾಮ ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರಿಗೆ ಆಗಮಿಸಿ ವಾಪಾಸ್ಸಾಗಿದ್ದರು. ಸ್ವಗ್ರಾಮಕ್ಕೆ ಬಂದಿದ್ದ ಸೋಂಕಿತ ಸ್ನೇಹಿತರ ಜೊತೆ ಸೇರಿ ಮದ್ಯದ ಪಾರ್ಟಿ ಸಹ ನಡೆಸಿದ್ದರು. ಹೀಗಾಗಿ ಅವರ ಜೊತೆ ಮದ್ಯದ ಪಾರ್ಟಿಯಲ್ಲಿ ಭಾಗಿಯಾಗಿದ್ದ 07 ಮಂದಿ ಸ್ನೇಹಿತರು ಹಾಗೂ 09 ಮಂದಿ ಕುಟುಂಬಸ್ಥರು ಸೇರಿ ಒಟ್ಟು 16 ಮಂದಿಯನ್ನ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ವೆಂಕಟೇಶ್ ಮೂರ್ತಿ ತಿಳಿಸಿದ್ದಾರೆ.
16 ಮಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಇಷ್ಟು ದಿನ ಶಿಡ್ಲಘಟ್ಟ ತಾಲೂಕಿನಲ್ಲಿ ಯಾವುದೇ ಸೋಂಕಿತ ಪ್ರಕರಣ ಪತ್ತೆಯಾಗಿರಲಿಲ್ಲ. ಈಗ ಈ ಸೋಂಕಿತ ಯುವಕ ಸ್ವಗ್ರಾಮಕ್ಕೆ ಬಂದು ಹೋಗಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ. ಇದರಿಂದ ಶಿಡ್ಲಘಟ್ಟಕ್ಕೂ ಕೊರೊನಾ ಸೋಂಕಿನ ನಂಟು ಅಂಟಿದಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!