ಚಿಕ್ಕಬಳ್ಳಾಪುರ| ಹೆತ್ತ ಮಗಳನ್ನೇ ಕೊಂದು ಕೆರೆಗೆಸೆದ ತಾಯಿ!

0
52

ಚಿಕ್ಕಬಳ್ಳಾಪುರ: ಬದುಕಿನ ಬಗ್ಗೆ ನೂರಾರು ಕನಸು ಕಟ್ಟಿಕೊಂಡು ಬೊಗಸೆ ಕಂಗಳಲ್ಲಿ ದಾಂಪತ್ಯದ ಜೀವನ ಎದುರು ನೋಡುತ್ತಿದ್ದ ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರ ಸೇರಿ ನಾಲ್ವರು ಧಾರಣವಾಗಿ ಕೊಂದಿದ್ದಾರೆ.
ತಾಯಿ ಮತ್ತು ಸಂಬಂಧಿಕರ ಕ್ರೌರ್ಯಕ್ಕೆ ಬಲಿಯಾದ ಹೆಣ್ಣುಮಗಳೇ ಆಂಧ್ರದ ಹಿಂದೂಪುರ ತಾಲೂಕಿನ ತೂಮಕುಂಟೆಯ ಸಂಧ್ಯಾ(19). ಜೂ.26 ರಂದು ಗೌರಿಬಿದನೂರು ತಾಲೂಕಿನ ಹುಲಿಕುಂಟೆಯ ಗೋಕುಂಟೆಯಲ್ಲಿ ಸಂಧ್ಯಾಳ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಶವದ ಜಾಡುಹಿಡಿದ ಪೊಲೀಸರು ಕೊಲೆಯ ರಹಸ್ಯ ಭೇದಿಸಿದ್ದು, ಕುಟುಂಬದ ಪ್ರತಿಷ್ಠೆಗಾಗಿ ಮಗನೊಂದಿಗೆ ಸೇರಿ ತಾಯಿಯೇ ಮಗಳನ್ನು ಕೊಂದಿರುವ ರಹಸ್ಯ ಬಯಲಾಗಿದೆ

LEAVE A REPLY

Please enter your comment!
Please enter your name here