Thursday, August 18, 2022

Latest Posts

ಚಿಕ್ಕಬಳ್ಳಾಪುರ| ಹೈಕೊರ್ಟ್ ನಿರ್ದೇಶನ: ಅಕ್ರಮವಾಗಿ ಸರ್ಕಾರಿ ಗೋಮಾಳದಲ್ಲಿ ನಿರ್ಮಿಸಿದ್ದ ಶಿಲುಬೆ ತೆರವು

ಚಿಕ್ಕಬಳ್ಳಾಪುರ: ತಾಲೂಕಿನ ಸೂಸೇಪಾಳ್ಯ-ಅರಿಕೇರಿ ಗೋಮಾಳ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಒಂದು ಬೃಹತ್ ಯೇಸು ಶಿಲುಬೆ ಸೇರಿದಂತೆ ಸುಮಾರು 14 ಶಿಲುಬೆಗಳನ್ನು ಜಿಲ್ಲಾಡಳಿತ ತೆರವು ಬುಧವಾರ ಮಾಡಿತು.
ತಾಲೂಕಿನ ಅರಿಕೆರೆ ಗ್ರಾಮದ ಸರ್ವೇ ನಂಬರ್ 10ರ 170 ಎಕರೆ ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಶಿಲುಬೆಗಳನ್ನು ಪ್ರತಿಷ್ಠಾಪಿಸಲಾಗಿತ್ತು.
ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ನೆಲಸಮತಟ್ಟು ಮಾಡಿ, ಪ್ರಚಾರ ಚಿತ್ರಗಳನ್ನು ಸಮುದಾಯದ ಮುಖಂಡರು ಹಾಕಿದ್ದರು. ಈ ಬಗ್ಗೆ ದೂರು ದಾಖಲಾಗಿ ಈ ವಿವಾದ ಹೈಕೋರ್ಟ್ ಮೆಟ್ಟಿಲೇರಿತ್ತು.
ಇತ್ತೀಚಿಗೆ ನ್ಯಾಯಾಲಯ ಅಕ್ರಮವಾಗಿ ನಿಲ್ಲಿಸಿರುವ ಶಿಲುಬೆಗಳನ್ನು ತೆರವು ಮಾಡುವಂತೆ ಸರಕಾರಕ್ಕೆ ಆದೇಶಿತ್ತು. ಸರಕಾರ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಡಿಸಿ ಸೂಚನೆಯಂತೆ ಚಿಕ್ಕಬಳ್ಳಾಪುರ ಉಪವಿಭಾಗಾಧಿಕಾರಿ ಎ.ಎನ್. ರಘುನಂದನ್ ನೇತೃತ್ವದಲ್ಲಿ ಪ್ರಭಾರ ತಹಶೀಲ್ದಾರ್ ತುಳಸಿ ಮತ್ತು ಅವರ ತಂಡ ಪೋಲಿಸರ ಸಹಯೋಗದೊಂದಿಗೆ ಬುಧವಾರ ಬೆಳಗ್ಗೆ ಸ್ಥಳಕ್ಕೆ ತೆರಳಿ ಕಾರ್ಯಚರಣೆ ನಡೆಸಿ ಶಿಲುಬೆ ತೆರವು ಮಾಡಿಸಿದ್ದಾರೆ.
ಶಿಲುಬೆ ತೆರವಿಗೆ ಗ್ರಾಮದ ಕ್ರೈಸ್ತ ಸಮುದಾಯದವರು ವಿರೋಧ ವ್ಯಕ್ತಪಡಿಸಿದರು. ಅಲ್ಲದೆ, ಜಿಲ್ಲಾಡಳಿತ, ಬಿಜೆಪಿ ಸರಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ವಿರುದ್ಧ ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ತೆರವು ಮಾಡಿದ ಬೆಟ್ಟದ ಮೇಲಿನ ಸ್ಥಳಕ್ಕೆ ತೆರಳಲು ಸಾರ್ವಜನಿಕರಿಗೆ ಸದ್ಯ ನಿರ್ಬಂಧ ಏರಲಾಗಿದೆ.
ಹೈಕೋರ್ಟ್ ಆದೇಶದಂತೆ ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ಪ್ರತಿಷ್ಠಾಪನೆ ಮಾಡಿದ್ಧ ಯೇಸು ಶಿಲುಬೆಯನ್ನು ತೆರವುಗೊಳಿಸಿದ್ದೇವೆ. ಇದರ ವರದಿಯನ್ನು ಹೈಕೋರ್ಟ್ಗೆ ಸಲ್ಲಿಸುತ್ತೇವೆ ಎಂದು ಎಸಿ ಎ.ಎನ್.ರಘುನಂದನ್ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!