Saturday, July 2, 2022

Latest Posts

ಚಿಕ್ಕಮಗಳೂರಿನಲ್ಲಿ ಕೊವ್ಯಾಕ್ಸಿನ್ ಲಸಿಕಾ ಅಭಿಯಾನಕ್ಕೆ ಚಾಲನೆ

ಹೊಸದಿಗಂತ ವರದಿ, ಚಿಕ್ಕಮಗಳೂರು:

ಕೋವಿಡ್ 19 ವಿರುದ್ಧ ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನಕ್ಕೆ ಶನಿವಾರ ಜಿಲ್ಲೆಯಲ್ಲಿ ಯಶಸ್ವಿ ಚಾಲನೆ ನೀಡಲಾಯಿತು.
ನಗರದ ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊವ್ಯಾಕ್ಸಿನ್ ಲಸಿಕೆ ಪಡೆದ ಆಸ್ಪತ್ರೆಯ ಡಿ.ದರ್ಜೆ ನೌಕರರಾದ ಗುರಮ್ಮ ಜಿಲ್ಲೆಯಲ್ಲಿ ಮೊದಲು ಲಸಿಕೆ ಪಡೆದವರು ಎನಿಸಿದರು.
ಸುಮಾರು ಹತ್ತು ತಿಂಗಳ ಕಾಲ ವಿಶ್ವವನ್ನೇ ತಲ್ಲಣಗೊಳಿಸಿದ್ದ ಕೊರೊನಾ ನಿಯಂತ್ರಣಕ್ಕೆ ಲಸಿಕೆ ಪಡೆಯಲು ಹೊರಟಿದ್ದೇವೆ ಎನ್ನುವುದನ್ನು ನೆನಪಿಸಿಕೊಳ್ಳುತ್ತಲೇ ರೋಮಾಂಚನಕಾರಿ ಅನುಭವದೊಂದಿಗೆ ಲಸಿಕಾ ಕೇಂದ್ರದತ್ತ ಹೆಜ್ಜೆ ಹಾಕುತ್ತಿದ್ದ ಆಸ್ಪತ್ರೆ ಸಿಬ್ಬಂದಿಗಳು ಅಳುಕುತ್ತಲೇ ತಮ್ಮ ಆಧಾರ್ ಕಾರ್ಡ್‍ಗಳನ್ನು ಆರೋಗ್ಯ ಕಾರ್ಯಕರ್ತರ ಕೈಗಿತ್ತು ಲಸಿಕೆ ಹಾಕಿಸಿಕೊಳ್ಳಲು ಮನಸ್ಸು ದೃಢ ಮಾಡಿಕೊಂಡರು.
ಮೊದಲ ಲಸಿಕೆ ಹಾಕಿಸಿಕೊಳ್ಳುವವರ ಅನುಭವ ಹೇಗಿರುತ್ತದೆ ಎಂಬ ಕುತೂಹಲದಿಂದ ಚುನಾಯಿತ ಪ್ರತಿನಿಧಿಗಳು, ಆಸ್ಪತ್ರೆ ವೈದ್ಯಾಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿಗಳು ಲಸಿಕಾ ಕೊಠಡಿಗೆ ಮುಗಿಬಿದ್ದರು.
ಗುರಮ್ಮ ಅವರಿಗೆ ಮೊದಲ ಲಸಿಕೆ ಹಾಕಿದ ಹಿರಿಯ ಆರೋಗ್ಯ ಸಹಾಯಕಿ ಎನ್.ಪದ್ಮಪ್ರಿಯಾ ಅವರು ಒಂದು ರೀತಿ ಪುಳಕಿತರಾದಂತೆ ಕಂಡು ಬಂದರೆ ಗುರಮ್ಮ ಅವರ ಮುಖದಲ್ಲಿ ಅಂಜಿಕೆಯ ಭಾವ ಕಾಣುತ್ತಿತ್ತು. ನಂತರ ಒಬ್ಬರ ಹಿಂದೆ ಮತ್ತೊಬ್ಬರು ಲಸಿಕೆ ಹಾಕಿಸಿಕೊಳ್ಳುವಾಗ ಎಲ್ಲರಲ್ಲೂ ಸಮಾಧಾನ ವ್ಯಕ್ತವಾಯಿತು. ಪ್ರಮುಖವಾಗಿ ಸ್ಥಳದಲ್ಲಿದ್ದ ಆರೋಗ್ಯಾಧಿಕಾರಿಗಳು, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳಲ್ಲಿ ಸಂತೃಪ್ತಿಯ ಭಾವ ಕಂಡು ಬಂತು.

ಮಾನಸಿಕವಾಗಿ ಸಿದ್ಧರಾಗಿ
ಬೆಳಗ್ಗೆ 11.30ರ ವೇಳೆಗೆ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಬಿ.ಜಿ.ಸೋಮಶೇಖರ್ ಲಸಿಕಾ ಅಭಿಯಾನವನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ದೇಶಾದ್ಯಂತ ಇಂದು ಚಾಲನೆ ನೀಡಿದ್ದಾರೆ. ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲಿದ್ದು, ಮುಂದಿನ ದಿನಗಳಲ್ಲಿ ಎಲ್ಲರೂ ಲಸಿಕೆ ಪಡೆಯಲು ಮಾನಸಿಕವಾಗಿ ಸಿದ್ಧರಾಗಬೇಕು ಎಂದರು.
ಈ ವೇಳೆ ಜಿಲ್ಲಾ ಪಂಚಾಯ್ತಿ ಸದಸ್ಯರುಗಳಾದ ಜಸಂತ ಅನಿಲ್‍ಕುಮಾರ್, ಬೆಳವಾಡಿ ರವೀಂದ್ರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ„ಕಾರಿ ಡಾ.ಎಸ್.ಎನ್.ಉಮೇಶ್, ಜಿಲ್ಲಾ ಸರ್ಜನ್ ಡಾ.ಸಿ.ಮೋಹನ್ ಕುಮಾರ್, ವೈದ್ಯ ಡಾ.ಕೆ.ಯು.ಲೋಕೇಶ್, ಆರ್‍ಸಿಎಚ್ ಅ„ಕಾರಿ ಡಾ.ಭರತ್ ಸೇರಿದಂತೆ ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss