spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, September 28, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಚಿಕ್ಕಮಗಳೂರಿನಲ್ಲಿ ವಿದ್ಯಾರ್ಥಿಗಳು- ಶಿಕ್ಷಕರಲ್ಲಿ ಹೆಚ್ಚಿದ ಕೊರೋನಾ ಸೋಂಕು: ಆತಂಕದಲ್ಲಿ ಜನತೆ

- Advertisement -Nitte

 ಹೊಸ ದಿಗಂತ ವರದಿ , ಚಿಕ್ಕಮಗಳೂರು:

ಕೋವಿಡ್-19 ಕಾರಣಕ್ಕೆ ಸುಧೀರ್ಘ ಕಾಲ ಮುಚ್ಚಲ್ಪಟ್ಟಿದ್ದ ಶಾಲಾ ಕಾಲೇಜುಗಳು ಪುನರಾರಂಭಗೊಂಡ ಬೆನ್ನಲ್ಲೆ ವಿದ್ಯಾರ್ಥಿಗಳು ಹಾಗೂ ಶಿಕ್ಷರಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವುದು ಕಾಫಿನಾಡಿನ ಜನರನ್ನು ಆತಂಕಕ್ಕೆ ತಳ್ಳಿದೆ.
ಶಾಲಾ-ಕಾಲೇಜು ಆರಂಭಗೊಂಡ ಕೇವಲ 6 ದಿನಗಳಲ್ಲಿ 15 ವಿದ್ಯಾರ್ಥಿಗಳು ಹಾಗೂ 12 ಶಿಕ್ಷಕರಲ್ಲಿ ಸೋಂಕು ದೃಢಪಟ್ಟಿದೆ. ಈ ಪೈಕಿ ಬುಧವಾರ ಒಂದೇ ದಿನ 11 ವಿದ್ಯಾರ್ಥಿಗಳು ಹಾಗೂ 7 ಶಿಕ್ಷಕರಲ್ಲಿ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಗಾದಿ ಗೌತಮ್ ತಿಳಿಸಿದ್ದಾರೆ.
ರಾಜ್ಯಾದ್ಯಂತ ಸೋಂಕಿನ ಪ್ರಕರಣಗಳು ಗಣನೀಯವಾಗಿ ಇಳಿಕೆಯಾದ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಮುಂಜಾಗ್ರತೆ ವಹಿಸಿಯೇ ಸರ್ಕಾರ ಜನರವರಿ 1 ರಿಂದ ಶಾಲಾ-ಕಾಲೇಜುಗಳನ್ನು ಆರಂಭಿಸಿದೆ. ಆದರೂ ವಿದ್ಯಾರ್ಥಿಗಳು ಹಾಗು ಶಿಕ್ಷಕರಲ್ಲಿ ಹೆಚ್ಚಿನ ಸೋಂಕಿನ ಪ್ರಕರಣ ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಸುಧೀರ್ಘ ಕಾಲದ ರಜೆ ನಂತರ ಲಗುಬಗೆಯಿಂದ ಆಫ್‍ಲೈನ್ ತರಗತಿಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಹಾಗೂ ಆನ್‍ಲೈನ್ ಪಾಠದ ಕಿರಿಕಿರಿಗಳಿಂದ ಮುಕ್ತರಾಗಿ ಶಾಲಾ-ಕಾಲೇಜುಗಳತ್ತ ಮುಖಮಾಡಿದ್ದ ಬೋಧಕ ವೃಂದದಲ್ಲೂ ಈಗ ಆತಂಕ ಛಾಯೆ ಕಾಣಿಸಿಕೊಳ್ಳಲಾರಂಭಿಸಿದೆ.
ವಿದ್ಯಾರ್ಥಿಗಳಲ್ಲಿ ಸೊಂಕಿನ ಪ್ರಕರಣ ಹೆಚ್ಚಾದ ಬೆನ್ನಲ್ಲೆ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲು ಮತ್ತೆ ಹಿಂದೇಟು ಹಾಕುತ್ತಿದ್ದಾರೆ. ಸೋಂಕು ತಗುಲಿದರೆ ಒಬ್ಬರಿಗೆ ಬಂದು ಹೋಗುವುದಲ್ಲ. ಮನೆ ಮಂದಿಯೆಲ್ಲಾ ಅದರಿಂದ ತೊಂದರೆ ಅನುಭವಿಸಬೇಕಾಗುತ್ತದೆ ಎನ್ನುವ ಕಾರಣಕ್ಕೆ ಅಂತಹ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳುವುದೇ ಬೇಡ ಎನ್ನವ ತೀರ್ಮಾನಕ್ಕೆ ಕೆಲವರು ಬಂರುತ್ತಿದ್ದಾರೆ.
ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ನಿಗಧಿತ ಗುರಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಆರ್‍ಪಿಸಿಆರ್ ಪರೀಕ್ಷೆಗಳನ್ನು ನಡೆಸುವ ಮೂಲಕ ಸೋಂಕು ಪ್ರಕರಣಗಳನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಆದರೂ ಈಗ ಸೋಂಕು ತಗುಲಿರುವವರ ಪ್ರಾಥಮಿಕ ಸಂಪರ್ಕಿತರನ್ನು ಆದಷ್ಟು ಬೇಗನೆ ಗುರುತಿಸಿ ಸೊಂಕಿನ ಸರಪಳಿಯನ್ನು ತುಂಡರಿಸುವ ಕೆಲಸ ಆಗಬೇಕಿದೆ.

ಲಸಿಕೆಯ ನಿರೀಕ್ಷೆಯಲ್ಲಿ ಜನತೆ
ಸೋಂಕು ನಿಯಂತ್ರಣಕ್ಕೆ ಬರುತ್ತಿರುವ ಹೊತ್ತಿನಲ್ಲೇ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಮತೆ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನತೆ ಈಗ ಕೊರೋನಾ ಸೋಂಕು ನಿಯಂತ್ರಿಸುವ ಲಸಿಕೆ ಬಗ್ಗೆ ಮಾತನಾಡಲಾರಂಭಿಸಿದ್ದಾರೆ. ಸಾಮೂಹಿಕ ಲಸಿಕಾ ಕಾರ್ಯಕ್ರಮ ಎಂದು ಆರಂಭಗೊಳ್ಳುತ್ತದೋ ಎನ್ನುವ ಕಾತುರದ ನಿರೀಕ್ಷೆಯಲ್ಲಿದ್ದಾರೆ.
ಈ ಹಿಂದೆ ದಿನವೊಂದಕ್ಕೆ 200ರ ಗಡಿದಾಟಿದ್ದ ಸೋಂಕಿನ ಸಂಖ್ಯೆ ಕೇವಲ ಏಳೆಂಟರ ಮಟ್ಟಕ್ಕೆ ಇಳಿಯುತ್ತಿರುವ ಹೊತ್ತಿನಲ್ಲಿ ಏಕಾಏಕಿ ಹತ್ತರೊಂದ ಇಪ್ಪತ್ತಷ್ಟಕ್ಕೆ ಜಿಗಿತ ಕಂಡಿರುವುದು ಸಹಜವಾಗಿಯೇ ಭಯ ಹುಟ್ಟಿಸಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss