Wednesday, August 10, 2022

Latest Posts

ಚಿಕ್ಕಮಗಳೂರು| ಎಡಬಿಡದ ಮಳೆ: ಭದ್ರಾ ಡ್ಯಾಂನ ಹೊರ ಹರಿವು ಹೆಚ್ಚಳ

ಚಿಕ್ಕಮಗಳೂರು: ಎಡಬಿಡದ ಮಳೆಯಿಂದ ತರೀಕೆರೆ ತಾಲ್ಲೂಕು ಲಕ್ಯಾದ ಭದ್ರಾ ಡ್ಯಾಂನ ಹೊರ ಹರಿವು ಹೆಚ್ಚಾಗಿದ್ದು, ಮುಂಜಾಗೃತಾ ಕ್ರಮವಾಗಿ ತರೀಕೆರೆ ತಾಲೂಕು ಸೋಂಪುರ ಗ್ರಾಮದ 250 ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದರು.
ಗ್ರಾಮದ ಕೆಲವರು ಸ್ಥಳಾಂತರಗೊಳ್ಳಲು ನಿರಾಕರಿಸಿದರೂ ಅವರನ್ನು ಮನವೊಲಿಸಿದ್ದೇವೆ. ಈ ಎಲ್ಲಾ 250 ಜನರನ್ನು ಬಾವಿಕೆರೆ ಗ್ರಾಮದ ಅಂಬಾ ಭವಾನಿ ಛತ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು.
ನಿನ್ನೆ ಭದ್ರಾ ಡ್ಯಾಂನ ಹೊರಹರಿವು 60,000 ಕ್ಯೂಸೆಕ್‍ಗೆ ತಲುಪಿತ್ತು. ಅದು 90000 ಕ್ಯೂಸೆಕ್‍ಗೆ ತಲುಪಿದರೆ ಸೋಂಪುರ ಗ್ರಾಮ ಮುಳುಗಡೆಯಾಗುವ ಸಂಭವ ಇರುವ ಕಾರಣ ರಾತ್ರಿ ವೇಳೆ ಜನರಿಗೆ ತೊಂದರೆಯಾಗಬಾರದು ಎನ್ನುವ ಹಿನ್ನೆಲೆಯಲ್ಲಿ ಆ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss