Friday, August 12, 2022

Latest Posts

ಚಿಕ್ಕಮಗಳೂರು| ಕೇವಲ 3 ಸಾವಿರ ರೂ. ಸಾಲದ ವ್ಯವಹಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಚಿಕ್ಕಮಗಳೂರು: ಕೇವಲ 3 ಸಾವಿರ ರೂ. ಸಾಲದ ವ್ಯವಹಾರಕ್ಕೆ ನಡೆದ ಜಗಳದಲ್ಲಿ ಇಬ್ಬರು ಜೀವ ಕಳೆದುಕೊಂಡಿರುವ ಘಟನೆ ತಾಲ್ಲೂಕಿನ ಶಿರವಾಸೆ ಸಮೀಪ ಗಂಧರ್ವಗಿರಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಕೊಟ್ಟ ಸಾಲ ವಾಪಾಸ್ ನೀಡಲಿಲ್ಲ ಎನ್ನುವ ಕಾರಣಕ್ಕೆ ಕೃಷ್ಣಪ್ಪ ಎಂಬಾತನನ್ನು ಬಸವರಾಜ ಎಂಬಾತ ಕತ್ತಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ನಂತರ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೃಷ್ಣಪ್ಪನು ಬಸವರಾಜನಿಂದ 3 ಸಾವಿರ ರೂ. ಸಾಲ ಪಡೆದಿದ್ದ ಅದನ್ನು ಹಿಂದಿರುಗಿಸಲು ವಿಳಂಭಮಾಡಿದ ಕಾರಣಕ್ಕೆ ಮೂರ್ನಾಲ್ಕು ಬಾರಿ ಇಬ್ಬರ ನಡುವೆ ಜನಗಳ ನಡೆದಿತ್ತು. ಮಂಗಳವಾರ ಕೃಷ್ಣಪ್ಪ ನೀರು ತರಲೆಂದು ಬಸವನ ಮನೆ ಬಳಿ ಇರುವ ಬಾವಿಗೆ ಹೋಗಿದ್ದಾಗ ಮತ್ತೆ ಜಗಳ ತೆಗೆದ ಬಸವ ಮನೆಯಿಂದ ಕತ್ತಿ ತಂದು ಕೃಷ್ಣಪ್ಪನ ಕುತ್ತಿಗೆಗೆ ಕಡಿದಿದ್ದಾನೆ. ಆತ ಸ್ಥಳದಲ್ಲೇ ಕುಸಿದುಬಿದ್ದು ಸಾವಪ್ಪಿದ್ದಾನೆ. ಇದನ್ನು ಕಂಡ ಆತನ ಪತ್ನಿ ಚೀರಿಕೊಂಡಿದ್ದಾಳೆ. ಇದರಿಂದ ಗಾಬರಿಗೊಂಡ ಆರೋಪಿ ಬಸವ ಮನೆಗೆ ತೆರಳಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಲ್ಲಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss