ಚಿಕ್ಕಮಗಳೂರು: ಜಲಪಾತದಲ್ಲಿ ಸ್ನಾನ ಮಾಡಲು ಹೋಗಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಸಾವಪ್ಪಿರುವ ಘಟನೆ ಕಳಸ ಸಮೀಪ ಅಬ್ಬುಗುಡಿಗೆ ಸುರುಮನೆಯಲ್ಲ್ಲಿ ನಡೆದಿದೆ.
ಸಂಸೆ ಸಮೀಪದ ಗುತ್ಯಡ್ಕದ ವಂಶಿತ್(16) ಮೃತ ಯುವಕನಾಗಿದ್ದು, ಆತ ಶನಿವಾರ ಮಧ್ಯಾಹ್ನ ತನ್ನ ನಾಲ್ಕು ಜನ ಸ್ನೇಹಿತರ ಜೊತೆ ಸುರುಮನೆ ಫಾಲ್ಸ್ ನೋಡಲು ಹೋಗಿದ್ದ ಈ ವೇಳೆ ಸ್ನಾನ ಮಾಡಲು ಇಳಿದಾಗ ನೀರಿನ ರಭಸಕ್ಕೆ ಸಿಕ್ಕಿ ಆಳಕ್ಕೆ ಎಳೆದೊಯ್ದು ಸಾವಪ್ಪಿದ್ದಾನೆ.
ಸ್ಥಳೀಯರಾದ ದಿನೇಶ್, ರಾಜೇಶ್, ಮಧು, ಪ್ರಕಾಶ್ ಎಂಬುವವರ ಶ್ರಮವಹಿಸಿ ಯುವಕನ ಮೃತದೇಹವನ್ನು ಸಂಜೆ ವೇಳೆಗೆ ಪತ್ತೆಹಚ್ಚಿದ್ದಾರೆ.