Monday, August 8, 2022

Latest Posts

ಚಿಕ್ಕಮಗಳೂರು ಜಿಲ್ಲೆಯಲ್ಲಿ 55 ಮಂದಿಗೆ ಕೊರೋನಾ, 10 ಮಂದಿ ಗುಣಮುಖ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಂಗಳವಾರ 55 ಕೊರೋನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.
ಚಿಕ್ಕಮಗಳೂರು ತಾಲ್ಲೂಕಿನಲ್ಲಿ 26 ಮಂದಿ, ಕಡೂರಿನಲ್ಲಿ 7, ತರೀಕೆರೆ ತಾಲ್ಲೂಕಿನಲ್ಲಿ 17, ಮೂಡಿಗೆರೆಯಲ್ಲಿ 1 ಹಾಗೂ ಶೃಂಗೇರಿ ತಾಲ್ಲೂಕಿನಲ್ಲಿ 4 ಪ್ರಕರಣಗಳು ಇಂದು ವರದಿಯಾಗಿದೆ.
ಸೋಂಕಿತರ ಸಂಖ್ಯೆ 758ಕ್ಕೇರಿದ್ದು, ಸಾವಿಗೀಡಾದವರ ಸಂಖ್ಯೆ 20ಕ್ಕೇರಿದೆ. ಮಂಗಳವಾರ ಒಟ್ಟು 10 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಟ್ಟು 394 ಜನರು ಚಿಕಿತ್ಸೆ ನಂತರ ಸೊಂಕು ಮುಕ್ತರಾಗಿದ್ದಾರೆ.
ಚಿಕ್ಕಮಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಕೊರೋನಾ ಸೊಂಕು ನಿಯಂತ್ರಣಕ್ಕೆ ಸಿಗದೆ ಹೆಚ್ಚುತ್ತಲೇ ಇದೆ. ಕಡೂರು ತಾಲ್ಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳ ನಂತರ ಸೋಂಕಿನ ಸಂಖ್ಯೆ ಒಂದಂಕಿಗೆ ಇಳಿದಿದ್ದರೆ ಹಲವು ದಿನಗಳ ನಂತರ ತರೀಕೆರೆಯಲ್ಲಿ ಅದರ ಸಂಕ್ಯೆ ಎರಡಂಕಿಗೆ ಏರಿದೆ.
ಚಿಕ್ಕಮಗಳೂರು ನಗರದ ಹೊಸ ಬಡಾವಣೆಗಳಿಗೂ ಸೋಂಕು ಹರಡುತ್ತಿರುವುದು ಆತಂಕ ಮೂಡಿಸಿದೆ. ಸಂತೆ ಮೈದಾನಾದ ಎಕೆ ಕಾಲೋನಿ, ರತ್ನಗಿರಿ ಬಡಾವಣೆ, ಆಲೇನಹಳ್ಳಿ, ಶೆಟ್ರುಬೀದಿಗಳಲ್ಲಿ ಹೊಸದಾಗಿ ಸೋಂಕಿತರು ಪತ್ತೆಯಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 309 ಕಂಟೈನ್‍ಮೆಂಟ್ ಝೋನ್‍ಗಳನ್ನು ಈವರೆಗೆ ಗುರುತಿಸಲಾಗಿದ್ದು, ಈ ಪೈಕಿ ಮಂಗಳವಾರ 12 ಝೋನ್‍ಗಳನ್ನು ಹಿಂದಕ್ಕೆ ಪಡೆಯಲಾಗಿದ್ದು, ಒಟ್ಟು 61 ಝೋನ್‍ಗಳನ್ನು ರದ್ದು ಪಡಿಸಲಾಗಿದೆ. ಹಾಲಿ 248 ಕಂಟೈನ್‍ಮೆಂಟ್ ಝೋನ್‍ಗಳಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss