Friday, August 12, 2022

Latest Posts

ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾನುವಾರ 113 ಜನರಿಗೆ ಕೊರೋನಾ ಸೋಂಕು ದೃಢ, 20 ಮಂದಿ ಗುಣಮುಖ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಭಾನುವಾರ 113 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಎರಡನೇ ಬಾರಿ ಸೋಂಕಿತರ ಸಂಖ್ಯೆ ಶತಕ ದಾಟಿದೆ. ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ.
ಚಿಕ್ಕಮಗಳೂರು ತಾಲ್ಲೂಕಿನಲ್ಲಿ 40, ಕಡೂರು 334, ತರೀಕೆರೆ 22, ಮೂಡಿಗೆರೆ 8, ಅಜ್ಜಂಪುರ 7 ಹಾಗೂ ಶೃಂಗೇರಿಯಲ್ಲಿ 2 ಮಂದಿಗೆ ಸೋಂಕು ತುಗುಲಿದೆ.
ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1569ಕ್ಕೆ ಏರಿದೆ. ಭಾನುವಾರ ಒಟ್ಟು 20 ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆಹೊಂದಿದ್ದು, ಈ ವರೆಗೆ ಒಟ್ಟು 654 ಜನರು ಗುಣಮುಖರಾದಂತಾಗಿದೆ.
ಭಾನುವಾರ ಮೃತಪಟ್ಟಿರುವ ಇಬ್ಬರು ಸೇರಿದಂತೆ ಜಿಲ್ಲೆಯಲ್ಲಿ ಈವರೆಗೆ ಒಟ್ಟು 31 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಒಟ್ಟು 884 ಸಕ್ರೀಯ ಪ್ರಕರಣಗಳಿದ್ದು ಆಸ್ಪತ್ರೆ ಹಾಗೂ ಹೋಂ ಐಸೋಲೇಷನ್‍ನಲ್ಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss