Thursday, June 30, 2022

Latest Posts

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತಿಬ್ಬರನ್ನು ಬಲಿ ಪಡೆದ ಕೊರೋನಾ

ಚಿಕ್ಕಮಗಳೂರು: ಕೊರೋನಾ ಮಹಾ ಮಾರಿ ಜಿಲ್ಲೆಯಲ್ಲಿ ಮತ್ತಿಬ್ಬರನ್ನು ಬಲಿಪಡೆದುಕೊಂದ್ದು, ಈವರೆಗೆ ಕೋವಿಡ್‍ನಿಂದ ಮೃತಪಟ್ಟವರ ಸಂಖ್ಯೆ 5 ಕ್ಕೇರಿದೆ.
ಶುಕ್ರವಾರ ಜಿಲ್ಲೆಯಲ್ಲಿ ಒಟ್ಟು 9 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಮೃತಪಟ್ಟಿರುವ ಇಬ್ಬರು ಚಿಕ್ಕಮಗಳೂರು ನಗರದವರಾಗಿದ್ದಾರೆ. 52 ವರ್ಷದ ಉಪ್ಪಳ್ಳಿ ಬಡಾವಣೆಯ ಓರ್ವ ವ್ಯಕ್ತಿ ಹಾಗೂ ರಾಮನಹಳ್ಳಿ ಬಡಾವಣೆಯ 72 ವರ್ಷದ ವೃದ್ಧ ಮೃತಪಟ್ಟವರಾಗಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 152 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಇಂದು ಗುಣಮುಖರಾಗಿ ಬಿಡುಗಡೆಗೊಂಡ 9 ಜನರು ಸೇರಿ ಒಟ್ಟು 93 ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 54 ಸಕ್ರೀಯ ಪ್ರಕರಣಗಳಿದ್ದು ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss