ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸೊಮವಾರ ಒಟ್ಟು 22 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 96 ಜನರು ಗುಣಮುಖರಾಗಿದ್ದಾರೆ. ಮೂರು ಮಂದಿ ಮೃತಪಟ್ಟಿದ್ದಾರೆ.
ಚಿಕ್ಕಮಗಳೂರು ತಾಲ್ಲೂಕಿನಲ್ಲಿ 6 ಜನರಿಗೆ, ಕಡೂರು ತಾಲ್ಲೂಕಿನಲ್ಲಿ 7 ಕೊಪ್ಪ ತಾಲ್ಲೂಕಿನಲ್ಲಿ 3, ಮೂಡಿಗೆರೆ ತಾಲ್ಲೂಕಿನಲ್ಲಿ 6 ಜನರಿಗೆ ಸೋಂಕು ತಗುಲಿದೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 8616 ಕ್ಕೇರಿದ್ದು, 1490 ಪ್ರಕರಣಗಳು ಸಕ್ರಿಯವಾಗಿದೆ. 7004ಮಂದಿ ಗುಣಮುಖರಾಗಿದ್ದಾರೆ. ಇದುವರೆಗೂ 122 ಜನರು ಮೃತಪಟ್ಟಿದ್ದಾರೆ.