Wednesday, June 29, 2022

Latest Posts

ಚಿಕ್ಕಮಗಳೂರು ಜಿಲ್ಲೆಯಲ್ಲಿ 1893 ಸ್ಥಾನಗಳ ಪೈಕಿ 1201 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳದ್ದೇ ಗೆಲುವು

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಈ ಬಾರಿ ಜಿಲ್ಲೆಯ 194 ಗ್ರಾಮ ಪಂಚಾಯ್ತಿಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಒಟ್ಟು 131 ಪಂಚಾಯ್ತಿಗಳಲ್ಲಿ ಅಧಿಕಾರ ಹಿಡಿಯಲಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಸಿ.ಕಲ್ಮರುಡಪ್ಪ ತಿಳಿಸಿದ್ದಾರೆ.
ಚುನಾವಣೆ ನಡೆದಿರುವ 1893 ಸ್ಥಾನಗಳ ಪ್ಯಕಿ 1201 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದು ಬಂದಿದ್ದಾರೆ. ಇದು ಪಕ್ಷಕ್ಕೆ ದೊರೆತಿರುವ ಅಭೂತಪೂರ್ವ ಗೆಲುವು. ಗ್ರಾಮೀಣ ಭಾಗದ ಜನರು ಸಹ ಪಕ್ಷದ ಬಗ್ಗೆ ವಿಶ್ವಾಸವಿಟ್ಟಿರುವುದು ಇದರಿಂದ ಸಾಬೀತಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಚಿಕ್ಕಮಗಳೂರು ತಾಲ್ಲೂಕಿನ 235 ಸ್ಥಾನಗಳ ಪೈಕಿ 146 ರಲ್ಲಿ ಬಿಜೆಪಿ ಸದಸ್ಯರು ಆಯ್ಕೆಯಾಗಿದ್ದು, 20 ಮಂದಿ ಬಿಜೆಪಿ ಬಂಡಾಯ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇನ್ನುಳಿದ 69 ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಜಯಗಳಿಸಿದ್ದಾರೆ ಎಂದು ಬಿಜೆಪಿ ತಾಲ್ಲೂಕು ಗ್ರಾಮಾಂತರ ಅಧ್ಯಕ್ಷ ಈಶ್ವರಳ್ಳಿ ಮಹೇಶ್ ತಿಳಿಸಿದ್ದಾರೆ.
ತಾಲ್ಲೂಕಿನ ಒಟ್ಟು 20 ಪಂಚಾಯ್ತಿಗಳ ಪೈಕಿ 17 ಪಂಚಾಯ್ತಿಗಳಲ್ಲಿ ಬಿಜೆಪಿಗೆ ಸಂಪೂರ್ಣ ಬಹುಮತ ಸಿಕ್ಕಿದ್ದು, ಸ್ವಂತ ಬಲದಲ್ಲಿ ಅಧಿಕಾರ ಹಿಡಿಯಲಿದೆ. ಉಳಿದಂತೆ ಸಕರಾಯಪಟ್ಟಣ, ನಾಗೇನಹಳ್ಳಿ ಮತ್ತು ಲಕ್ಕುಮನಹಳ್ಳಿ ಪಂಚಾಯ್ತಿಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೆಚ್ಚು ಸ್ಥಾನ ಗಳಿಸಿವೆ ಎಂದು ತಿಳಿಸಿದ್ದಾರೆ.
ಗುಪ್ತಚರ ವರದಿಯಲ್ಲೂ ಬಿಜೆಪಿಗೆ ಹೆಚ್ಚು ಸ್ಥಾನ
ಈಲ್ಲಾ ಗುಪ್ತಚರ ಪೊಲೀಸರ ವರದಿಯಲ್ಲೂ ಬಿಜೆಪಿ ಒಟ್ಟು ಸ್ಥಾನಗಳ ಪೈಕಿ ಶೇ.50 ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಬಾಚಿಕೊಂಡಿದೆ.
ಅವಿರೋಧ ಆಯ್ಕೆಯೂ ಸೇರಿ ಒಟ್ಟು 2004 ಸ್ಥಾನಗಳ ಪೈಕಿ 1063 ಸ್ಥಾನಗಳಲ್ಲಿ ಬಿಜೆಪಿ ಸದಸ್ಯರು ಗೆದ್ದುಬಂದಿದ್ದರೆ, ಕಾಂಗ್ರೆಸ್ ಪಕ್ಷ 606 ಸ್ಥಾನಗಳಿಗೆ ತೃಪ್ತಿಪಟ್ಟಿಕೊಳ್ಳುವಂತಾಗಿದೆ. 199 ಸ್ಥಾನಗಳಲ್ಲಷ್ಟೇ ಜೆಡಿಎಸ್ ಗೆಲುವು ಸಾಧಿಸಲಿದ್ದು, 1 ಸ್ಥಾನದಲ್ಲಿ ಎಸ್‍ಡಿಪಿಐ ಹಾಗೂ 133 ಸ್ಥಾನಗಳಲ್ಲಿ ಇತರರು ಗೆದ್ದಿದ್ದಾರೆಂದು ಗುಪ್ತಚರ ವರದಿ ತಿಳಿಸಿದೆ.
ಎನ್‍ಆರ್‍ಪುರದಲ್ಲಿ ಬಿಜೆಪಿ 60, ಜೆಡಿಎಸ್ 63 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಕೊಪ್ಪ ತಾಲ್ಲೂಕಿನಲ್ಲಿ 114 ಬಿಜೆಪಿ ಹಾಗೂ 73 ಸ್ಥಾನದಲ್ಲಿ ಕಾಂಗ್ರೆಸ್, ತರೀಕೆರೆ ತಾಲ್ಲೂಕಿನಲ್ಲಿ 273 ಸ್ಥಾನಗಳಲ್ಲಿ ಬಿಜೆಪಿ, 123 ಸ್ಥಾನಗಳಲ್ಲಿ ಕಾಂಗ್ರೆಸ್ ಹಾಗೂ 5 ಸ್ಥಾನಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.
ಕಡೂರು ತಾಲ್ಲೂಕಿನಲ್ಲಿ ಬಿಜೆಪಿ 252, ಕಾಂಗ್ರೆಸ್ 131 ಹಾಗೂ ಜೆಡಿಎಸ್ ಬೆಂಬಲಿತರು 102 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಮೂಡಿಗೆರೆ ತಾಲ್ಲೂಕಿನಲ್ಲಿ ಬಿಜೆಪಿ ಬೆಂಬಲಿತರು 116 ಸ್ಥಾನಗಳಲ್ಲಿ ಗೆದ್ದಿದ್ದು, ಕಾಂಗ್ರೆಸ್ 61 ಹಾಗೂ ಜೆಡಿಎಸ್ ಬೆಂಬಲಿಗರು 50 ಸ್ಥಾನಗಳಲ್ಲಿ ಗೆದ್ದಿದ್ದಾರೆ.
ಚಿಕ್ಕಮಗಳೂರು ತಾಲ್ಲೂಕಿನಲ್ಲಿ 208 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಗೆದ್ದಿದ್ದು, 73 ರಲ್ಲಿ ಕಾಂಗ್ರೆಸ್ ಹಾಗೂ 40 ರಲ್ಲಿ ಜೆಡಿಎಸ್ ಬೆಂಬಲಿತರು ಗೆಲುವು ಸಾಧಿಸಿದ್ದಾರೆ. ಅಜ್ಜಂಪುರ ತಾಲ್ಲುಕಿನಲ್ಲಿ ಬಿಜೆಪಿ ಬೆಂಬಲಿತರು 139 ಸ್ಥಾನಗಳಲ್ಲಿ ಗೆದ್ದಿದ್ದರೆ ಕಾಂಗ್ರೆಸ್ ಬೆಂಬಲಿತರು 69 ರಲ್ಲಿ ಹಾಗೂ 2 ಸ್ಥಾನಗಳಲ್ಲಿ ಮಾತ್ರ ಜೆಡಿಎಸ್ ಬೆಂಬಲಿತರು ಗೆದ್ದಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss