ಚಿಕ್ಕಮಗಳೂರು: ಗುರುವಾರ ಒಂದೇ ದಿನ ಜಿಲ್ಲೆಯಲ್ಲಿ 30 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಒಟ್ಟು 21 ಪುರುಷರು ಹಾಗೂ 9 ಮಹಿಳೆಯರಲ್ಲಿ ಸೊಂಕು ದೃಢಪಟ್ಟಿದ್ದು, ಇದರಲ್ಲಿ 13 ಐಎಲ್ಐ ಪ್ರಕರಣಗಳು, ಸೋಂಕಿತರ ಸಂಪರ್ಕದಿಂದ 7, ಬೆಂಗಳೂರಿನಿಂದ ಬಂದ 3 ಹಾಗೂ ರ್ಯಾಂಡಂ ಟೆಸ್ಟ್ನಲ್ಲಿ 2 ಜನರಲ್ಲಿ ಕೊರೋನಾ ದೃಢಪಟ್ಟಿದೆ.
ಚಿಕ್ಕಮಗಳೂರು ತಾಲ್ಲೂಕಿನಲ್ಲೇ ಒಟ್ಟು 14 ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ನಗರದ ಮಾರ್ಕೆಟ್ ರಸ್ತೆ, ನೇಕಾರಬೀದಿ, ದರ್ಜಿಬೀದಿ, ಕೆಂಪನಹಳ್ಳಿ ಬಡಾವಣೆಗಳಲ್ಲಿ ಹೊಸದಾಗಿ ಪ್ರಕರಣಗಳು ಕಾಣಿಸಿಕೊಂಡಿದ್ದು, ತಾಲ್ಲೂಕಿನ ಕಳಸಾಪುರ, ಲಕ್ಯ, ಮುಗುಳವಳ್ಳಿ, ಗ್ರಾಮಗಳಲ್ಲಿ ಸೋಂಕು ಕಂಡುಬಂದಿದೆ.
ಉಳಿದಂತೆ ಜಿಲ್ಲೆಯ ಕಡೂರು ತಾಲ್ಲೂಕಿನಲ್ಲಿ 7 ಪ್ರಕರಣಗಳು, ತರೀಕೆರೆ ತಾಲ್ಲೂಕಿನಲ್ಲಿ 3, ಕೊಪ್ಪ ತಾಲ್ಲೂಕಿನಲ್ಲಿ 3, ಮೂಡಿಗೆರೆ ತಾಲ್ಲೂಕಿನಲ್ಲಿ 2 ಹಾಗೂ ಅಜ್ಜಂಪುರ ತಾಲ್ಲೂಕಿನಲ್ಲಿ 1 ಪ್ರಕರಣ ಪತ್ತೆಯಾಗಿದೆ.
ಇದೇ ವೇಳೆ ಒಂದೇ ದಿನ 22 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿರುವುದು ಸಮಾಧಾನ ತಂದಿದೆ. ಜಿಲ್ಲೆಯಲ್ಲಿ ಈ ವರೆಗೆ ಒಟ್ಟು ಸೋಂಕಿತರ ಸಂಖ್ಯೆ ಒಟ್ಟು 198 ಕ್ಕೇರಿದ್ದು, 68 ಪ್ರಕರಣಗಳು ಸಕ್ರಿಯವಾಗಿದೆ.