Saturday, July 2, 2022

Latest Posts

ಚಿಕ್ಕಮಗಳೂರು ಜಿಲ್ಲೆಯ 1893 ಸ್ಥಾನಗಳಿಗೆ ಚುನಾವಣೆ

ಹೊಸದಿಗಂತ ವರದಿ,ಚಿಕ್ಕಮಗಳೂರು:

ಜಿಲ್ಲೆಯ 194 ಗ್ರಾಮ ಪಂಚಾಯ್ತಿಗಳ 1893 ಸ್ಥಾನಗಳಿಗೆ ಡಿ.22 ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದ, 5290 ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ಬರೆಯಲಿದ್ದಾರೆ.
ಜಿಲ್ಲೆಯಲ್ಲಿ ಚುನಾವಣೆ ಘೋಷಣೆಯಾಗಿದ್ದ 209 ಗ್ರಾ.ಪಂ.ಗಳ ಪೈಕಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಚುನಾವಣೆ ಬಹಿಷ್ಕರಿಸಿರುವ 15 ಗ್ರಾಪಂಗಳ 126 ಸ್ಥಾನಗಳು ಮತ್ತು ಬೇರೆ ಬೇರೆ ಕಾರಣಕ್ಕೆ ನಾಮಪತ್ರ ಸಲ್ಲಿಕೆಯಾಗದ ಇತರ 13 ಸ್ಥಾನಗಳು ಹಾಗೂ ಅವಿರೋಧವಾಗಿ ಆಯ್ಕೆಯಾಗಿರುವ 107 ಸ್ಥಾನಗಳನ್ನು ಹೊರತುಪಡಿಸಿ ಉಳಿದ 194 ಪಂಚಾಯ್ತಿಗಳ 1893 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
6,29,165 ಮತದಾರರು
ಹಾಲಿ ಚುನಾವಣೆ ನಡೆಯಲಿರುವ 194 ಪಂಚಾಯ್ತಿಗಳಲ್ಲಿ ಒಟ್ಟು 3,13,589 ಪುರುಷರು ಹಾಗೂ 3,16,065 ಮಹಿಳೆಯರು ಸೇರಿ ಒಟ್ಟು 6,29,165 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಚಿಕ್ಕಮಗಳೂರು ತಾಲೂಕಿನಲ್ಲಿ 1,13,839, ಕಡೂರು 1,57,638, ಕೊಪ್ಪ 61,421, ಮೂಡಿಗೆರೆ 78,053, ಎನ್.ಆರ್.ಪುರ 40,228, ಶೃಂಗೇರಿ 26,671, ತರೀಕೆರೆ 85,434, ಅಜ್ಜಂಪುರ 66,321 ಮತದಾರರಿದ್ದಾರೆ.
ತಾಲೂಕುವಾರು ಸ್ಥಾನಗಳು
ಅಜ್ಜಂಪುರ 517, ಚಿಕ್ಕಮಗಳೂರು 982, ಕಡೂರು 1161, ಕೊಪ್ಪ 454, ಮೂಡಿಗೆರೆ 706, ಎನ್.ಆರ್.ಪುರ 286, ಶೃಂಗೇರಿ 208, ತರೀಕೆರೆ 776.
5430 ಸಿಬ್ಬಂದಿ ನೇಮಕ
ಒಟ್ಟು 1002 ಮತಗಟ್ಟೆಗಳ ಪೈಕಿ ಚುನಾವಣಾ ಬಹಿಷ್ಕಾರದ ಕಾರಣಕ್ಕೆ 72 ಮತಗಟ್ಟೆಗಳಲ್ಲಿ ಚುನಾವಣೆ ಇರುವುದಿಲ್ಲ. ಒಟ್ಟು 930 ಮತಗಟ್ಟೆಗಳಲ್ಲಿ ನಾಳೆ ಮತದಾನ ನಡೆಯಲಿದ್ದು, ಇದಕ್ಕಾಗಿ 5430 ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ಈಗಾಗಲೇ ಆಯಾ ಮತಗಟ್ಟೆಗಳಿಗೆ ತೆರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss