Tuesday, July 5, 2022

Latest Posts

ಚಿಕ್ಕಮಗಳೂರು| ದೇವಸ್ಥಾನಗಳಿಗೆ ನುಗ್ಗಿ ಚಿನ್ನ, ಬೆಳ್ಳಿ ಆಭರಣಗಳ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ಚಿಕ್ಕಮಗಳೂರು: ದೇವಸ್ಥಾನಗಳಿಗೆ ನುಗ್ಗಿ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು 5 ಲಕ್ಷ ರೂ. ಬೆಲೆಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆ ಬೂದಿಗೆರೆಯ ರಾಜು ಮತ್ತು ಕಡೂರು ತಾಲೂಕು ಮಚ್ಚೇರಿಯ ತಮ್ಮಯ್ಯ ಎಂಬಿಬ್ಬರು ಬಂಧಿತ ಆರೋಪಿಗಳಾಗಿದ್ದು, ಇವರು ಚಿಕ್ಕಮಗಳೂರು ಜಿಲ್ಲೆಯಲ್ಲದೆ ಶಿವಮೊಗ್ಗ ಹಾಗೂ ಹೊಸದುರ್ಗ ತಾಲೂಕುಗಳಲ್ಲೂ ಹಲವು ದೇವಸ್ಥಾನಗಳಲ್ಲಿ ಕಳವು ಮಾಡಿದ್ದಾರೆ.
ಕಡೂರು ತಾಲೂಕಿನ ಅಂಚೆ ಚೋಮನಹಳ್ಳಿಯ ಹೇಮಗಿರಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ವಿ.ಸಿದ್ದರಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ಖಂಡುಗದ ಹಳ್ಳಿಯ ಶ್ರೀ ಚೌಡೇಶ್ವರಿ ದೇವಸ್ಥಾನ, ತುರುವನಳ್ಳಿ ಶ್ರೀ ಪ್ಲೇಗಿನಮ್ಮ ದೇವಸ್ಥಾನ, ಬೀರೂರಿನ ಶ್ರೀ ಕಾವಲು ಚೌಡೇಶ್ವರಿ ದೇವಸ್ಥಾನ, ಹಿರೇನಲ್ಲೂರಿನ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ, ಯಳ್ಳಂಬಳಸೆಯ ಶ್ರೀ ಬೊಮ್ಮಲಿಂಗೇಶ್ವರ ಸ್ವಾಮಿ ದೇವಸ್ಥಾನ, ಅರೆಹಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಗುಡ್ಡೆಹಳ್ಳಿಯ ಶ್ರೀ ಕೆಂಚರಾಯಸ್ವಾಮಿ ದೇವಸ್ಥಾನ, ಗೆದ್ಲೇಹಳ್ಳಿಯ ಶ್ರೀ ಬಯಲು ಬಸವೇಶ್ವರ ಸ್ವಾಮಿ ದೇವಸ್ಥಾನಗಳು, ಶಿವಮೊಗ್ಗ ಜಿಲ್ಲೆಯ ದೇವಕಾಟಿಕೊಪ್ಪ ಗ್ರಾಮದ ಶ್ರೀ ಮಾರಿಕಾಂಬ ದೇವಸ್ಥಾನ, ಪೆÇಮ್ಮನಾಳು ಗ್ರಾಮದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನಗಳು ಹಾಗೂ ಹೊಸದುರ್ಗ ತಾಲೂಕಿನ ಕಾರೇಹಳ್ಳಿ ಶ್ರೀ ಹರಿಹರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಳವು ಮಾಡಿದ್ದಾರೆ.
ಆರೋಪಿಗಳಿಂದ ದೇವರ ಮುಖವಾಡಗಳು, ಕಣ್ಣುಗಳು, ಛತ್ರಿಗಳು, ಕರಡಿಗೆ ಹಾಗೂ ಪೂಜಾ ಸಾಮಗ್ರಿಗಳನ್ನು ಒಳಗೊಂಡ 3,90,550 ರೂ. ಬೆಲೆಯ 5.350 ಕೆ.ಜಿ.ಬೆಳ್ಳಿ, ದೇವರಿಗೆ ಹಾಕುವ ತಾಳಿ, ಮೂಗುತಿ, ಕಿವಿಯೋಲೆಗಳನ್ನು ಒಳಗೊಂಡ ಸುಮಾರು 80 ಸಾವಿರ ರೂ. ಬೆಲೆಯ 16 ಗ್ರಾಂ ಚಿನ್ನ, 6,500 ರೂ. ನಗದು, ಕಂಚು ಮತ್ತು ಪಂಚಲೋಹದ ದೀಪಗಳು, ಒಂದು ಬೈಕ್ ಸೇರಿ ಒಟ್ಟು 5 ಲಕ್ಷ ರೂ.ಬೆಲೆಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣವನ್ನು ಭೇದಿಸಿದ ವಿಶೇಷ ತಂಡದ ನೇತೃತ್ವವನ್ನು ಕಡೂರು ವೃತ್ತ ನಿರೀಕ್ಷಕ ಮಂಜುನಾಥ, ಪಿಎಸ್‍ಐಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss