ಚಿಕ್ಕಮಗಳೂರು: ಕೋವಿಡ್-19 ನಿಯಂತ್ರಣಕ್ಕೆ ಜಾರಿಯಲ್ಲಿರುವ ನಿರ್ಬಂಧಗಳನ್ನು ಉಲ್ಲಂಘಿಸಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದ 25 ಜನರನ್ನು ವಶಕ್ಕೆ ಪಡೆದು ನ.ರಾ.ಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಭಾನುವಾರ ಸಂಜೆÉ 6.30ರ ಸಮಯದಲ್ಲಿ ನ.ರಾ.ಪುರ ಪಟ್ಟಣದ ಬೆಟ್ಟಗೆರೆ ವಾಸಿ ಮುಸ್ತಾಫ್ ಖಾನ್ ಎಂಬಾತನ ಮನೆಯ ಒಂದು ಕೊಠಡಿಯಲ್ಲಿ ಸುಮಾರು 25 ಮಂದಿ ಸಾಮೂಹಿಕ ಪ್ರಾರ್ಥನೆ ನಡೆಸಿದ್ದಾರೆ.
ಕೊರೊನಾ ತಡೆಗಟ್ಟುವ ಯಾವುದೇ ಮುಂಜಾಗ್ರಾತಾ ಕ್ರಮವನ್ನು ವಹಿಸದೇ ನಿರ್ಲಕ್ಷ್ಯತನ ವಹಿಸಿರುವುದಲ್ಲದೆ, ಸರ್ಕಾರ ಸಾಮೂಹಿಕ ಪ್ರಾರ್ಥನೆಯನ್ನು ನಿಷೇದಿಸಿದ್ದರೂ ಅದನ್ನು ಉಲ್ಲಂಘಿಸಿ ಸಾಮಾಜಿಕ ಅಂತವರನ್ನು ಕಾಪಾಡಿಕೊಳ್ಳದೆ ಎಲ್ಲರೂ ಒಟ್ಟಿಗೆ ಕುಳಿತುಕೊಂಡು ನಮಾಜ್ ಮಾಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮುಸ್ತಾಫ್ ಖಾನ್, ಮೈಪೂಜ್ ಖಾನ್, ಅಬ್ದುಲ್ ಇರ್ಫಾನ್, ಉಸ್ಮಾನ್ ಪಾಷಾ, ಫಯಾಜ್ ಖಾನ್, ಜಬೀವುಲ್ಲಾ ಖಾನ್, ನವೀದ್, ಹುಸೇನ್, ಸುಹಾನ್, ಯಾಸೀನ್ ಖಾನ್, ಸೈಫೂಲ್ಲಾ ಖಾನ್, ದಸ್ತಗಿರಿ ಖಾನ್, ಸರ್ಪರಾಜ್ ಖಾನ್, ಅಖೀಬ್ಬ ಖಾನ್, ಸೈಯಾದ್ ಮಕ್ಸೂಬ್, ಅಬ್ದುಲ್ ಐಯಾನ್, ಅಮೀರ್ ಖಾನ್, ಸೈಯದ್ ಇಬ್ರಾಹಿಂ, ಜರ್ಫುಲ್ಲಾ ಖಾನ್, ಸಮೀರ್ ಖಾನ್, ಅಂಜುಮ್ ಖಾನ್, ಮಸಿವುಲ್ಲಾ ಖಾನ್, ಮಜೀವುಲ್ಲಾ ಖಾನ್, ಮೌಸೀನ್ ಖಾನ್, ಮಹಮ್ಮದ್ ಹುಸೇನ್ ಅವರುಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.