Monday, July 4, 2022

Latest Posts

ಚಿಕ್ಕಮಗಳೂರು| ಭಾರೀ ಗಾಳಿ ಮಳೆಗೆ 4 ಮನೆಗಳಿಗೆ ಹಾನಿ

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಕಳೆದ ಮೂರು ದಿನಗಳಿಂದ ಸುರಿದ ಭಾರೀ ಮಳೆ ಗಾಳಿಗೆ ನಗರಸಭೆ ವ್ಯಾಪ್ತಿಯ 4 ಮನೆಗಳು ಹಾನಿಯಾಗಿದ್ದು ನಗರಸಭೆ ಆಯುಕ್ತ ಬಸವರಾಜ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ ಶಂಕರಪುರದ ಕುಟುಂಬವೊಂದಕ್ಕ್ಕೆ ತಾತ್ಕಾಲಿಕ ಆಶ್ರಯ ವ್ಯವಸ್ಥೆ ಕಲ್ಪಿಸಿದರು.
ಬಳಿಕ ಮಾತನಾಡಿದ ಅವರು, ನಗರದಲ್ಲಿ ಸುರಿದ ಭಾರೀ ಮಳೆಗೆ ಶಂಕರಪುರ ಕಾಲೋನಿಯಲ್ಲಿ 2 ಕೋಟೆ ಬಡಾವಣೆಯಲ್ಲಿ 1 ಹಾಗೂ ಪೆನ್ಷನ್ ಮೊಹಲ್ಲಾದಲ್ಲಿ ಒಂದು ಮನೆ ಹಾನಿಯಾಗಿದೆ. ಶಂಕರಪುರದಲ್ಲಿ ನೆಲೆಸಿರುವ ಜಯಲಕ್ಷ್ಮೀ ಎಂಬವವರ ಮನೆ ಸಂಪೂರ್ಣ ಕುಸಿತಗೊಂಡಿದ್ದು ಅವರಿಗೆ ತಾತ್ಕಲಿಕವಾಗಿ ಆಶ್ರಯ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಇವರ ಕುಟುಂಬವು ಆರ್ಥಿಕವಾಗಿ ಹಿಂದುಳಿದಿದ್ದು ಇಬ್ಬರು ಮಕ್ಕಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಸೂಕ್ತ ಆಸರೆಯಿಲ್ಲದೇ ಕುಟುಂಬ ಸಂಕಷ್ಟದಲ್ಲಿದ್ದು ಮುಂದಿನ ದಿನಗಳಲ್ಲಿ ಆಶ್ರಯ ಸಮಿತಿಯಲ್ಲಿ ಚರ್ಚಿಸಿ ಶಾಶ್ವತ ಪರಿಹಾರ ಒದಗಿಸಲಾಗುವುದು, ಮಳೆಯಿಂದ ಮನೆ ಕುಸಿತಗೊಂಡಿದ್ದು ಪ್ರಾಣ ಹಾನಿಯಾಗುವಂವ ಅವಘಡ ತಪ್ಪಿದೆ, ನಗರಸಭೆ ವ್ಯಾಪ್ತಿಯಲ್ಲಿ ಮಳೆಹಾನಿಯಿಂದ ತೊಂದರೆಗೊಳಗಾದಲ್ಲಿ ತಕ್ಷಣವೇ ನಗರಸಭೆ ಸಹಾಯವಾಣಿಗೆ ಕರೆ ಮಾಡಿದ್ದಲ್ಲಿ ಸ್ಪಂದಿಸಲಿದೆ ಎಂದು ತಿಳಿಸಿದರು.
ನಗರದಲ್ಲಿ ಯುಜಿಡಿ ಅಮೃತ್ ಕಾಮಗಾರಿಗಳು ಮುಗಿಯುವ ಹಂತ ತಲುಪಿದ್ದು ತಾಲ್ಲೂಕು ಕಛೇರಿ ಒಳಗೊಂಡಂತೆ ಹಲವೆಡೆ ಸ್ವಚ್ಚಗೊಳಿಸಲು ತೆರೆದಿರುವ ಮ್ಯಾನ್‌ಹೋಲ್‌ಗೆ ಕಿಡಿಗೇಡಿಗಳು ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆ. ಇದರಿಂದಾಗಿ ಒಳಚರಂಡಿಯಲ್ಲಿ ಮಲಿನ ತ್ಯಾಜ್ಯ ಕಟ್ಟಿಕೊಂಡು ನೀರು ಸರಾಗವಾಗಿ ಹರಿಯಲು ತೊಂದರೆಯಾಗಲಿದೆ ತ್ಯಾಜ್ಯವನ್ನು ಎಸೆಯುವವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಅಂತವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಗರ ಆಶ್ರಯ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ ನಗರದಲ್ಲಿ ಅರ್ಹ ಫಲಾನುಭವಿಗಳಿಗೆ ಆಶ್ರಯ ನಿವೇಶನಗಳು ದೊರಕಬೇಕು. ಆ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು, ಕಳೆದ ಮೂರ್‍ನಾಲ್ಕು ದಿನಗಳ ಗಾಳಿ ಮಳೆಯಿಂದ ಕೆಲವೆಡೆ ಮನೆಗಳು ಕುಸಿತಗೊಂಡಿದ್ದು ಪರಿಶೀಲನೆ ನಡೆಸಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ನಿರಾಶ್ರಿತರಿಗೆ ತಾತ್ಕಲಿಕ ವ್ಯವಸ್ಥೆ ಕಲ್ಪಿಸಿದ್ದು ಎಂದು ತಿಳಿಸಿದರು.
ಮನೆ ಹಾನಿಗೊಳಗಾದ ನಿರಾಶ್ರಿತೆ ಜಯಲಕ್ಷಿ ಇದ್ದ ಮನೆಯೊಂದು ಮಳೆಯಿಂದ ಸಂಪೂರ್ಣವಾಗಿ ಹಾನಿಯಾಗಿದ್ದು ನಗರಸಭೆ ತಾತ್ಕಲಿಕ  ನೆಲೆ ಕಲ್ಪಿಸಿದೆ ಬದಲಾಗಿ ನಮಗೆ ಶಾಶ್ವತವಾಗಿ ವಸತಿ ಕಲ್ಪಿಸಿ ವ್ಯವಸ್ಥೆ ಮಾಡಿಕೊಡುವಂತೆ ಆಯುಕ್ತರು ಹಾಗೂ ಆಶ್ರಯ ಸಮಿತಿ ಅಧ್ಯಕ್ಷರಲ್ಲಿ ಕೇಳಿಕೊಂಡರು.
ಈ ಸಂದರ್ಭ ಆರೋಗ್ಯ ಪರಿವೀಕ್ಷಕ ವೆಂಕಟೇಶ್, ಸ್ಯಾನಿಟೈಸರಿ ಸೂಪರ್‌ವೈಸರ್ ಅಣ್ಣಯ್ಯ, ಸೇರಿದಂತೆ ಮತ್ತಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss