Thursday, August 18, 2022

Latest Posts

ಚಿಕ್ಕಮಗಳೂರು| ಭಾರೀ ಮಳೆಯಿಂದ ರಸ್ತೆಯಲ್ಲಿ ಬಿರುಕು: ಚಾರ್ಮಾಡಿ ಘಾಟಿಯಲ್ಲಿ ಆ.12 ರ ಮಧ್ಯರಾತ್ರಿ ವರೆಗೆ ಎಲ್ಲ ವಾಹನ ಸಂಚಾರ ನಿಷೇಧ

ಚಿಕ್ಕಮಗಳೂರು: ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟಿಯಲ್ಲಿ ಆಗಸ್ಟ್ 12 ರ ಮಧ್ಯರಾತ್ರಿ ವರೆಗೆ ಎಲ್ಲ ರೀತಿಯ ವಾಹನ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಬಗಾದಿ ಎಸ್.ಗೌತಮ್ ಆದೇಶಿಸಿದ್ದಾರೆ.
ಮಳೆ ಹಾಗೂ ಗಾಳಿ ಇದೇ ರೀತಿ ಮುಂದುವರಿದಲ್ಲಿ ರಸ್ತೆಗೆ ಬಾಗಿರುವ ಭಾರೀ ಗಾತ್ರದ ಮರಗಳೊಂದಿಗೆ ಅಧಿಕ ಪ್ರಮಾಣದ ಭೂಕುಸಿತ ಉಂಟಾಗಿ ಸಾಕಷ್ಟು ತೊಂದರೆಯಾಗುವ ಸಂಭವವಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರ ನಿಷೇಧಿಸುವಂತೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ಕಾರ್ಯಪಾಲಕ ಇಂಜಿನೀಯರ್ ಕೋರಿಕೆ ಸಲ್ಲಿಸಿದ್ದ ಮೇರೆಗೆ ಜಿಲ್ಲಾಧಿಕಾರಿಗಳು ಈ ಅದೇಶ ಹೊರಡಿಸಿದ್ದಾರೆ.
ನಿರ್ಬಂಧ ತೆರವಾಗುವವರೆಗೆ ಬದಲಿ ಮಾರ್ಗವಾದ ಮೂಡಿಗೆರೆ ಹ್ಯಾಂಡ್‍ಪೋಸ್ಟ್-ಜನ್ನಾಪುರ-ಆನೆಮಹಲ್-ಶಿರಾಡಿ-ಗುಂಡ್ಯ ಮುಖಾಂತರ ವಾಹನಗಳು ಸಂಚರಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!