Wednesday, July 6, 2022

Latest Posts

ಚಿತ್ರದುರ್ಗದಲ್ಲಿ ಶನಿವಾರ ಮತ್ತೆ ಮೂರು ಕೊರೋನಾ ಪಾಸಿಟಿವ್ ಪತ್ತೆ!

ಚಿತ್ರದುರ್ಗ: ಸುಮಾರು ನಲವತ್ತು ದಿನಗಳ ನಂತರ ಕೋಟೆನಾಡು ಚಿತ್ರದುರ್ಗದಲ್ಲಿ ಕೊರೋನಾ ವೈರಸ್ ಹಾವಳಿ ಆರಂಭವಾಗಿದೆ. ತಡವಾಗಿ ಬಂದು ಈಗ ತನ್ನ ಕೈ ಚಳಕ ತೋರಿಸುವ ಮೂಲಕ ಜನರಲ್ಲಿ ನಡುಕ ಹುಟ್ಟಿಸಿದೆ. ಹಾಗಾಗಿ ಇಷ್ಟು ದಿನ ನೆಮ್ಮದಿಯಿಂದ ಇದ್ದ ಜಿಲ್ಲೆಯ ಜನರು ಈಗ ಆತಂಕದಲ್ಲಿ ಸಿನ ಕಳೆಯುವಂತಾಗಿದೆ.

ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ತಬ್ಲಿಘಿ ಜಮಾತೆ ಸಮಾವೇಶದಲ್ಲಿ ಭಾಗವಹಿಸಿದ್ದ 15 ಜನರು ಮೇ 5 ರಂದು ಚಿತ್ರದುರ್ಗಕ್ಕೆ ಆಗಮಿಸಿದ್ದರು. ಈ ವಿಷಯ ತಿಳಿದ ನಗರದ ನಿವಾಸಿಗಳು ತೀವ್ರ ಆತಂಕಕ್ಕೆ ಗುರಿಯಾಗಿದ್ದರು. ಅದರಲ್ಲಿ ನಾಲ್ವರಿಗೆ ಅಹಮದಾಬಾದ್‌ನಲ್ಲಿಯೇ ಸೋಂಕು ಇರುವುದು ದೃಢಪಟ್ಟಿತ್ತು. ಬಳಿಕ ಅಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು

ನಂತರ ಎರಡು ಬಾರಿ ನಡೆಸಿದ ಪರೀಕ್ಷೆಯಲ್ಲಿಯೂ ವರದಿ ನೆಗೆಟೀವ್ ಬಂದಿತ್ತು. ಹಾಗಾಗಿ ಅವರನ್ನು ಅಹಮದಾಬಾದ್‌ನಿಂದ ಚಿತ್ರದುರ್ಗಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದರು.

ಚಿತ್ರದುರ್ಗಕ್ಕೆ ಆಗಮಿಸಿದ್ದ ಎಲ್ಲಾ 15 ತಬ್ಲೀಘಿಗಳನ್ನು ಸ್ಟ್ಯಾಂಡರ್ಸ್ ಆಪರೇಷನ್ ಪ್ರೊಟೊಕಾಲ್ (ಎಸ್‌ಒಪಿ) ಪ್ರಕಾರ ಚಿತ್ರದುರ್ಗ ನಗರದ ಜೆಎಂ.ಐಡಿ ವೃತ್ತದಲ್ಲಿರುವ ವಿದ್ಯಾರ್ಥಿ ನಿಯಲಯದಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಎಲ್ಲರ ಗಂಟಲು ದ್ರವ ಸಂಗ್ರಹಿಸಿ ಮೇ 6 ರಂದು ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಈಗ 15 ತಬ್ಲಿಘಿಗಳ ಪೈಕಿ ಮೂವರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ದುರಂತ ಎಂದರೆ ಅಹಮದಾಬಾದ್‌ನಲ್ಲಿ ಈ ಮೊದಲು ಸೋಂಕಿಗೆ ಒಳಗಾಗಿದ್ದ ನಾಲ್ವರ ಪೈಕಿ, ಮೂವರಿಗೆ ಈಗ ಮತ್ತೆ ಸೋಂಕು ದೃಢಪಟ್ಟಿರುವುದು ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿದೆ.

ಶುಕ್ರವಾರ ಸಂಜೆಯ ವರದಿಯಲ್ಲಿ ಬಂದ ಸೋಂಕಿತರು 64 ವರ್ಷದ ಪುರುಷರಾಗಿದ್ದಾರೆ. ಕ್ರಮವಾಗಿ ಪಿ.751, ಪಿ.752, ಪಿ. 753 ಸಂಖ್ಯೆ ನೀಡಲಾಗಿದೆ. ಶನಿವಾರದ ವರದಿಯಲ್ಲಿ ದೃಢಪಟ್ಟ ಮೂವರು ಗಂಡು ಮಕ್ಕಳಾಗಿದ್ದು ವಯಸ್ಸು ಮೂವತ್ತರೊಳಗಿದೆ. ಪಿ.787 (34), ಪಿ.788 (26), ಪಿ.789 (17) ವರ್ಷದವರು ಎನ್ನಲಾಗಿದೆ. ಇವದು ಸಹಾ ಗುಜರಾತಿನ ತಬ್ಲಘಿ ಜಮಾತೆ ಸಮಾವೇಶದಲ್ಲಿ ಭಾಗವಹಿಸಲು ಅಹಮದಾಬಾದ್‌ಗೆ ಹೋಗಿ ಬಂದವರಾಗಿದ್ದಾರೆ ಎನ್ನಲಾಗಿದೆ.

ಸೋಂಕು ದೃಢಪಟ್ಟ ರೋಗಿಗಳನ್ನು ಚಿತ್ರದುರ್ಗದ ಜಿಲ್ಲಾಸ್ಪತ್ರೆಯ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ. ಈವರೆಗೆ ಜಿಲ್ಲೆಯಲ್ಲಿ ಪತ್ತೆಯಾದ ಪಾಸಿಟಿವ್ ಪ್ರಕರಣಗಳ ಸಂಖ್ಯೆಯ 7 ಕ್ಕೆ ಏರಿದಂತಾಗಿದೆ. ಇವರಲ್ಲಿ ಒಬ್ಬರು ಗುಣಮುಖರಾಗಿದ್ದು, 6 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ಈವರೆಗೆ ನೆಮ್ಮದಿಯಿಂದ ಜಿಲ್ಲೆಯ ಜನರಲ್ಲಿ ಈಗ ನಡುಕ ಶುರುವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss