ಚಿತ್ರದುರ್ಗ: ಕೋವಿಡ್-೧೯ ಸೋಂಕಿನಿಂದ ಗುಣಮುಖರಾದ ೧೨ ಮಂದಿಯನ್ನು ಬುಧವಾರ ಚಳ್ಳಕೆರೆ ಕೋವಿಡ್ ಹೆಲ್ತ್ ಕೇರ್ ಸೆಂಟರ್ನಿಂದ ಬಿಡುಗಡೆ ಮಾಡಲಾಯಿತು. ಅಧಿಕಾರಿಗಳು, ವೈದ್ಯರು ಹಾಗೂ ಸಿಬ್ಬಂದಿ ಹೂಗುಚ್ಛ ನೀಡಿ ಬೀಳ್ಕೊಟ್ಟರು.
ಕೋವಿಡ್ ವೈರಸ್ ಸೋಂಕು ದೃಢಪಟ್ಟಿದ್ದ ಪಿ-೨೨೩೨, ಪಿ-೨೨೩೯, ಪಿ-೨೨೪೦, ಪಿ-೨೨೪೧, ಪಿ-೨೨೪೨, ಪಿ-೨೨೪೪, ಪಿ-೨೨೪೫, ಪಿ-೨೨೪೬, ಪಿ-೨೨೪೯, ಪಿ-೨೪೫೫, ಪಿ-೨೪೫೬, ಪಿ-೨೪೫೭ ಸೇರಿದಂತೆ ಒಟ್ಟು ೧೨ ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದವರು.
ಚಳ್ಳಕೆರೆ ಕೋವಿಡ್ ಹೆಲ್ತ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಲ್ಲರೂ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಚಿತ್ರದುರ್ಗ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಲ್ಲರೂ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯನ್ನು ಹೊರತುಪಡಿಸಿದರೆ ಚಿತ್ರದುರ್ಗ ಜಿಲ್ಲೆಯು ಕೊರೊನಾ ಸೋಂಕಿನಿಂದ ಮುಕ್ತವಾಗಿದೆ.