Monday, July 4, 2022

Latest Posts

ಚಿತ್ರದುರ್ಗ| ಗ್ರಾಮ ಪಂಚಾಯಿತಿ ಚುನಾವಣೆ: 3420 ಸದಸ್ಯರ ಆಯ್ಕೆ

ಹೊಸ ದಿಗಂತ ವರದಿ, ಚಿತ್ರದುರ್ಗ:

ಗ್ರಾಮ ಪಂಚಾಯಿತಿ ಚುನಾವಣೆ-2020 ಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಒಟ್ಟು 189 ಗ್ರಾ.ಪಂ.ಗಳಲ್ಲಿನ 3421 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದಿದೆ. ಇದರಲ್ಲಿ 347 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. 1 ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗಿಲ್ಲ. ಬುಧವಾರ ನಡೆದ ಮತ ಎಣಿಕೆಯಲ್ಲಿ ಇನ್ನುಳಿದ 3073 ಸದಸ್ಯ ಸ್ಥಾನಗಳ ಫಲಿತಾಂಶ ಪ್ರಕಟವಾಗಿದೆ.
ಜಿಲ್ಲೆಯಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆದಿದ್ದು ಮೊದಲ ಹಂತದಲ್ಲಿ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ತಾಲ್ಲೂಕು ಹಾಗೂ ಎರಡನೇ ಹಂತದಲ್ಲಿ ಚಳ್ಳಕೆರೆ, ಹಿರಿಯೂರು ಹಾಗೂ ಮೊಳಕಾಲ್ಮುರು ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲಾಗಿತ್ತು.
ಚಿತ್ರದುರ್ಗ ತಾಲ್ಲೂಕಿನ 38 ಗ್ರಾ.ಪಂ.ಗಳ 727 ಸದಸ್ಯ ಸ್ಥಾನಗಳು, ಹೊಸದುರ್ಗ 33 ಗ್ರಾ.ಪಂ.ಗಳ 533 ಸದಸ್ಯ ಸ್ಥಾನಗಳು, ಹೊಳಲ್ಕೆರೆ 29 ಗ್ರಾ.ಪಂ.ಗಳ 493 ಸದಸ್ಯ ಸ್ಥಾನಗಳು, ಹಿರಿಯೂರು 33 ಗ್ರಾ.ಪಂ.ಗಳ 590 ಸದಸ್ಯ ಸ್ಥಾನಗಳು, ಚಳ್ಳಕೆರೆ 40 ಗ್ರಾ.ಪಂ.ಗಳ 755ಸದಸ್ಯ ಸ್ಥಾನಗಳಿಗೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನ 16 ಗ್ರಾ.ಪಂ.ಗಳ 323 ಸದಸ್ಯ ಸ್ಥಾನಗಳು ಸೇರಿದಂತೆ ಒಟ್ಟು 189 ಗ್ರಾ.ಪಂ.ಗಳ 3421 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇದರಲ್ಲಿ ಚಿತ್ರದುರ್ಗ ತಾಲ್ಲೂಕಿನ 1 ಸದಸ್ಯ ಸ್ಥಾನಕ್ಕೆ ನಾಮ ಪತ್ರ ಸಲ್ಲಿಕೆಯಾಗಿಲ್ಲ.
347 ಸದಸ್ಯರು ಅವಿರೋಧ ಆಯ್ಕೆ : ಜಿಲ್ಲೆಯ ಆರು ತಾಲ್ಲೂಕುಗಳಿಂದ ಒಟ್ಟು ೩೪೭ ಗ್ರಾಮ ಪಂಚಾಯಿತಿ ಸದಸ್ಯರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚಿತ್ರದುರ್ಗ 92, ಹೊಸದುರ್ಗ 35, ಹೊಳಲ್ಕೆರೆ 31, ಮೊಳಕಾಲ್ಮುರು 31, ಚಳ್ಳಕೆರೆ 68, ಹಿರಿಯೂರು 90 ಸದಸ್ಯರು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 347 ಸದಸ್ಯರು ಅವಿರೋಧ ಆಯ್ಕೆ ನಡೆದಿದೆ.
3073 ಸದಸ್ಯರು ಮತದಾನ ನಂತರ ಆಯ್ಕೆ : 3073 ಸದಸ್ಯರು ಮತದಾನ ನಂತರ ಆಯ್ಕೆಯಾಗಿದ್ದಾರೆ. ಚಿತ್ರದುರ್ಗ ೬೩೪, ಹೊಸದುರ್ಗ 498, ಹೊಳಲ್ಕೆರೆ 462, ಮೊಳಕಾಲ್ಮುರು 292, ಚಳ್ಳಕೆರೆ 687, ಹಿರಿಯೂರು 500೦ ಸದಸ್ಯರು ಸೇರಿದಂತೆ ಮತದಾನದ ನಂತರ ಒಟ್ಟು ಜಿಲ್ಲೆಯಲ್ಲಿ 3073 ಸದಸ್ಯರು ಆಯ್ಕೆಯಾಗಿದ್ದಾರೆ.
ಚುನಾಯಿತ ಸದಸ್ಯರ ವರ್ಗವಾರು ವಿವರ : 3420 ಗ್ರಾ.ಪಂ. ಸದಸ್ಯ ಸ್ಥಾನಗಳಿದ್ದು, ಅನುಸೂಚಿತ ಜಾತಿಯಲ್ಲಿ ಸಾಮಾನ್ಯ 376, ಮಹಿಳೆ 482 ಸೇರಿ 858, ಅನುಸೂಚಿತ ಪಂಗಡದಲ್ಲಿ ಸಾಮಾನ್ಯ 282, ಮಹಿಳೆ 403 ಸೇರಿ 685, ಬಿಸಿಎಂ-ಎ ವರ್ಗದಲ್ಲಿ ಸಾಮಾನ್ಯ 72, ಮಹಿಳೆ 170 ಸೇರಿ ಒಟ್ಟು 242, ಬಿಸಿಎಂ-ಬಿ ವರ್ಗದಲ್ಲಿ ಸಾಮಾನ್ಯ 44, ಮಹಿಳೆ 8 ಸೇರಿ ಒಟ್ಟು52 ಸದಸ್ಯರು, ಸಾಮಾನ್ಯದಲ್ಲಿ 890, ಮಹಿಳೆ 693 ಸೇರಿ ಒಟ್ಟು 1583 ಸದಸ್ಯರು ಆಯ್ಕೆಯಾಗಿದ್ದಾರೆ.
ಚಿತ್ರದುರ್ಗ ತಾಲ್ಲೂಕಿನ ಸುಲ್ತಾನಿಪುರ ಕ್ಷೇತ್ರದಲ್ಲಿ ಅನುಸೂಚಿತ ಜಾತಿ ಮಹಿಳೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಪರಿಶೀಲನೆ ವೇಳೆ ನಾಮಪತ್ರ ತಿರಸ್ಕೃತವಾಗಿವಿರುವುದರಿಂದ ಈ ಸ್ಥಾನಕ್ಕೆ ಆಯ್ಕೆ ನಡೆದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss