Sunday, August 14, 2022

Latest Posts

ಚಿತ್ರದುರ್ಗ ಜಿಲ್ಲೆಯಲ್ಲಿ ಮಂಗಳವಾರ 13 ಜನರಿಗೆ ಕೋವಿಡ್ ದೃಢ , ಸೋಂಕಿತರ ಸಂಖ್ಯೆ 813 ಕ್ಕೆ ಏರಿಕೆ

ಚಿತ್ರದುರ್ಗ:  ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಸಂಬಂಧಿಸಿದಂತೆ ಮಂಗಳವಾರದ ವರದಿಯಲ್ಲಿ ಮತ್ತೆ 13 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 813 ಕ್ಕೆ ಏರಿಕೆಯಾದಂತಾಗಿದೆ.
ಹಿರಿಯೂರು ತಾಲ್ಲೂಕಿನಲ್ಲಿ 01,  ಚಳ್ಳಕೆರೆ-01, ಹೊಳಲ್ಕೆರೆ-02 ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲಿ 09 ಸೇರಿದಂತೆ ಒಟ್ಟು 13 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.  ಮಂಗಳವಾರ ಒಟ್ಟು 617 ಜನರ ಗಂಟಲು, ಮೂಗು ದ್ರವ ಮಾದರಿಯನ್ನು ಸಂಗ್ರಹಿಸಲಾಗಿದೆ.  ವರದಿಯಲ್ಲಿ 13 ಜನರಿಗೆ ಕೋವಿಡ್ ಇರುವುದು ದೃಢಪಟ್ಟಿದ್ದು,  ಇದರಿಂದಾಗಿ ಸೋಂಕಿತರ ಸಂಖ್ಯೆ 813 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 16 ಜನ ಮೃತಪಟ್ಟಿದ್ದಾರೆ.  ಸೋಂಕಿತರ ಪೈಕಿ ಈಗಾಗಲೆ 374 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಜಿಲ್ಲೆಯಲ್ಲಿ ಸದ್ಯ 423 ಸಕ್ರಿಯ ಪ್ರಕರಣಗಳು ಇವೆ.
423 ಸಕ್ರಿಯ ಪ್ರಕರಣಗಳ ಪೈಕಿ ಚಿತ್ರದುರ್ಗದ ಕೋವಿಡ್ ಆಸ್ಪತ್ರೆಯಲ್ಲಿ 95, ಭರಮಸಾಗರ-11, ಹಿರಿಯೂರು ತಾಲ್ಲೂಕು ಧರ್ಮಪುರ-30, ಚಳ್ಳಕೆರೆ ತಾಲ್ಲೂಕು ಪರಶುರಾಂಪುರ- 12, ಹೊಸದುರ್ಗ ತಾಲ್ಲೂಕು ಬೆಲಗೂರು- 13, ಕೆ.ಕೆ. ಪುರ 09, ಮೊಳಕಾಲ್ಮೂರು ತಾಲ್ಲೂಕು ರಾಂಪುರ 07, ಹಿರಿಯೂರು ತಾಲ್ಲೂಕು ಮರಡಿಹಳ್ಳಿ 25,  ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ- 08, ಹೊಳಲ್ಕೆರೆ ತಾಲ್ಲೂಕು ಬಿ.ದುರ್ಗ-22, ಹೊಳಲ್ಕೆರೆ ಹಾಸ್ಟೆಲ್ ಕೋವಿಡ್ ಕೇರ್ ಸೆಂಟರ್‍ನಲ್ಲಿ 03, ಚಿತ್ರದುರ್ಗ ಜೆಎಂಐಟಿ ವೃತ್ತದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ 10. ಮೊಳಕಾಲ್ಮೂರಿನ ಆದರ್ಶ ಶಾಲೆಯಲ್ಲಿ 12, ಚಳ್ಳಕೆರೆ ಬಿಸಿಎಂ ಹಾಸ್ಟೆಲ್ ಸಿ.ಸಿ ಸೆಂಟರ್ 28, ಹೊಸದುರ್ಗ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ 14, ಹಿರಿಯೂರು ತಾಲ್ಲೂಕಿನ ದೇವರಕೊಟ್ಟ ಮೂರಾರ್ಜಿ ಶಾಲೆ ಸಿ.ಸಿ ಸೆಂಟರ್-02,  ಚಿತ್ರದುರ್ಗ ಬಿಎಂ ಸಿಹೆಚ್ 01. ಜಿಲ್ಲೆಯಲ್ಲಿ ಪಾಸಿಟೀವ್ ಕಂಡುಬಂದು, ಬೇರೆ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 22. ಹೋಂ ಕ್ವಾರಂಟೈನ್‍ನಲ್ಲಿ 99 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ಜಿಲ್ಲೆಯಲ್ಲಿ ಒಟ್ಟು 204 ಕಂಟೈನ್ಮೆಂಟ್ ವಲಯಗಳಿವೆ.  ಸೋಂಕಿತರಿಗೆ ಸಂಬಂಧಿಸಿದಂತೆ ಒಟ್ಟು 5376 ಜನ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಪರ್ಕಿತರನ್ನು ಗುರುತಿಸಲಾಗಿದೆ.  ಈವರೆಗೆ ಸಾರಿ ಮತ್ತು ಐಎಲ್‍ಐ, ಯುಆರೈನ ಒಟ್ಟು 5169 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.    ಜಿಲ್ಲೆಯಲ್ಲಿ 1448 ಜನ ಹೋಂ ಕ್ವಾರಂಟೈನ್‍ನಲ್ಲಿ ಇದ್ದಾರೆ. ಈವರೆಗೆ 19,394 ಜನರ ಮಾದರಿ ಸಂಗ್ರಹಿಸಲಾಗಿದ್ದು, 16,696 ಜನರ ವರದಿ ನೆಗೆಟೀವ್ ಬಂದಿದೆ, ಉಳಿದ 262 ಮಾದರಿಗಳು ಪರೀಕ್ಷೆಗೆ ಒಳಪಡಿಸುವ ಅಗತ್ಯವಿಲ್ಲದ ಕಾರಣ ತಿರಸ್ಕøತಗೊಂಡಿವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss