Saturday, August 13, 2022

Latest Posts

ಚಿತ್ರದುರ್ಗ| ದೇಶಪ್ರೇಮಿ, ಕ್ರಾಂತಿಕಾರಿ ಹೋರಾಟಗಾರ ಭಗತ್‌ಸಿಂಗ್ ಜನ್ಮದಿನ ಆಚರಣೆ

ಚಿತ್ರದುರ್ಗ: ಮಹಾನ್ ದೇಶಪ್ರೇಮಿ, ಕ್ರಾಂತಿಕಾರಿ ಹೋರಾಟಗಾರ ಭಗತ್‌ಸಿಂಗ್ ಅವರ ೧೧೩ನೇ ಜನ್ಮ ದಿನದ ಅಂಗವಾಗಿ ನಗರದ ರೋಟರಿ ಬಾಲಭವನದ ಎದುರಿನ ಭಗತ್‌ಸಿಂಗ್ ಉದ್ಯಾನವನದಲ್ಲಿ ಸೋಮವಾರ ಭಗತ್‌ಸಿಂಗ್ ಅವರ ಜನ್ಮದಿನ ಆಚರಿಸಲಾಯಿತು.
ಭಗತ್‌ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಾಮಾಜಿಕ ಅಂತರದ ನಿಯಮಕ್ಕೆ ಅನುಗುಣವಾಗಿ ಕಾರ್ಯಕ್ರಮ ನೇರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರೂ ಪುಷ್ಪಾರ್ಚನೆ ಮಾಡುವ ಮೂಲಕ ಭಗತ್‌ಸಿಂಗ್ ಅವರಿಗೆ ಗೌರವ ಸಲ್ಲಿಸಿದರು.
ಜಿಲ್ಲಾ ಎ.ಬಿ.ವಿ.ಪಿ. ಜಿಲ್ಲಾಧ್ಯಕ್ಷರಾದ ಗಂಗಾಧರ್, ನಗರ ಕಾರ್ಯದರ್ಶಿ ಆದ ಚಂದ್ರಶೇಖರ್ ಕೆ.ಎಸ್. ಹಾಗೂ ಕಾರ್ಯಕರ್ತರಾದ ಸತೀಶ್ ಭಗತ್, ಕೃತಿಕಾ, ಭಾಗ್ಯ, ತೇಜಸ್, ಅಜೆಯ್, ದೀಪಕ್ ರಾಜ್,ದರ್ಶನ್ ಅವಿನಾಶ್, ಪ್ರಮೋದ್, ಷಣ್ಮುಖ, ಭರತ್, ಮುರುಗೇಶ್, ಕೋಮಲ ಮುಂತಾದವರು ಉಪಸ್ಥಿತರಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss