Tuesday, July 5, 2022

Latest Posts

ಚಿತ್ರದುರ್ಗ ನಗರದ ರಸ್ತೆಗಳ ಅಭಿವೃದ್ಧಿಗೆ ಒತ್ತು: ಶಾಸಕ ಜಿ.ಎಚ್.ತಿಪ್ಪಾರೆಡ್ಡಿ

ಹೊಸದಿಗಂತ ವರದಿ,ಚಿತ್ರದುರ್ಗ: 

ನಗರದ ವಿವಿಧ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಮುಂದಿನ ಮಾರ್ಚ್ ಅಂತ್ಯದೊಳಗೆ ನಗರದ ರಾಜಬೀದಿ ದೊಡ್ಡಪೇಟೆಯ ರಸ್ತೆ ನಿರ್ಮಾಣ ಕಾರ್ಯ ಪೂರ್ಣವಾಗಲಿದೆ ಎಂದು ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಭರವಸೆ ನೀಡಿದ್ದಾರೆ.
ನಗರದ ದೊಡ್ಡಪೇಟೆಯ ಜೈನ್ ದೇವಾಲಯದ ಬಳಿ ಮತ್ತು ಜಿಲ್ಲಾ ಆಸ್ಪತ್ರೆ ಹತ್ತಿರದ ಮದಕರಿ ಸರ್ಕಲ್ ಬಳಿ ಭಾನುವಾರ ಸಿ.ಸಿ. ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಸುದ್ದಿಗಾರೊಂದಿಗೆ ಅವರು ಮಾತನಾಡಿದರು.
ನಗರದ ಉಚ್ಚೆಂಗೆಲಮ್ಮನ ದೇವಸ್ಥಾನದಿಂದ ಜೋಗಿಮಟ್ಟಿ ಸರ್ಕಲ್, ಜೋಗಿಮಟ್ಟಿ ಸರ್ಕಲ್‌ನಿಂದ ಸರ್ಕಾರಿ ಆಸ್ಪತ್ರೆ ಮುಂಭಾಗದವರೆಗೆ ರಸ್ತೆ ಅಗಲೀಕರಣ ಮಾಡಿ ಮುಖ್ಯ ರಸ್ತೆಗೆ ಸೇರಿಸಲಾಗುವುದು. ಜೋಗಿಮಟ್ಟಿ ಸರ್ಕಲ್‌ನಿಂದ ಮದಕರಿ ಸರ್ಕಲ್‌ವರೆಗೂ ಸಹ ಅಗಲೀಕರಣವನ್ನು ೨.೫೭ ಕೋಟಿ ವೆಚ್ಚದಲ್ಲಿ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲಾಗುತ್ತದೆ ಎಂದರು.
ರಸ್ತೆಯಲ್ಲಿ ಲೈಟ್‌ನ ಕ್ಯಾಟಸ್, ಬಿಳಿಲೈನ್ ಹಾಕಲಾಗುವುದು. ಮದಕರಿ ಸರ್ಕಲ್ ಅಗಲವಾಗಿ ಮಾಡಲಾಗುವುದು ೧.೨೭ ಕೋಟಿ ವೆಚ್ಚದಲ್ಲಿ ಒನಕೆ ಓಬವ್ವ ಸರ್ಕಲ್‌ನಿಂದ ಮದಕರಿ ಪ್ರತಿಮೆ ಕಾಣುವಂತೆ ರಸ್ತೆ ಅಗಲೀಕರಣ ಮಾಡಲಾಗುವುದು. ನಗರದ ಒಳ ರಸ್ತೆಗಳ ನಿರ್ಮಾಣ ಎಲ್ಲಾ ಮುಗಿಯುವ ಹಂತದಲ್ಲಿದ್ದು, ಉಳಿದ ರಸ್ತೆಗಳನ್ನು ಅದಷ್ಟು ಬೇಗ ಪೂರ್ಣಗೊಳಿಸಲಾಗುವುದು. ಯಾರೂ ಸಹ ರಸ್ತೆ ಅಗೆಯುವುದು ಮಾಡಬಾರದು. ಈ ರೀತಿ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ದುರ್ಗದ ರಾಜಬೀದಿಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು. ಮೊದಲಿನಂತೆ ರಾಜಬೀದಿಯಂತೆ ಅಗಲೀಕರಣ ಮಾಡಿ ಇತಿಹಾಸ ಮರುಕಳಿಸುವಂತೆ ಮಾಡಲಾಗುವುದು. ರಸ್ತೆಗಳ ಅಕ್ಕ-ಪಕ್ಕದಲ್ಲಿನ ಮರಗಳನ್ನು ತೆರವು ಮಾಡಲಾಗುವುದು. ಇದರ ಬದಲಿಗೆ ಬೇರೆ ಸಸಿಗಳನ್ನು ನಡೆಲಾಗುವುದು ಎಂದ ಶಾಸಕರು, ಮುಂದಿನ ಕೆಲವೇ ದಿನಗಳಲ್ಲಿ ರಾಜಬೀದಿ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ. ಇಲ್ಲಿನ ನಿವಾಸಿಗಳು ನಿರ್ಮಾಣ ಕಾರ್ಯಕ್ಕೆ ಸಹಕಾರ ನೀಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಹರೀಶ್, ಚಂದ್ರಶೇಖರ್, ಶಶಿಧರ್, ವೆಂಕಟೇಶ್, ಅಂಗಡಿ ಮಂಜುನಾಥ್, ಶ್ರೀನಿವಾಸ್, ಮಾಜಿ ಸದಸ್ಯರಾದ ರವಿಶಂಕರ್, ಶ್ರೀನಿವಾಸ್, ಗಾ.ನಾ ಲಿಂಗರಾಜ್, ಪೌರಾಯುಕ್ತ ಜೆ.ಟಿ.ಹನುಮಂತರಾಜು, ಮುಖಂಡರಾದ ಬಿಜೆಪಿ ರಾಘವೇಂದ್ರ, ಬಸವರಾಜ್, ಮುಸ್ಟೂರಪ್ಪ, ವಿರೂಪಾಕ್ಷಪ್ಪ, ಶ್ರೀಧರ್, ಇಂಜಿನಿಯರ್ ಮನೋಹರ್ ಸೇರಿದಂತೆ ಇತರರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss