Wednesday, July 6, 2022

Latest Posts

ಚಿತ್ರದುರ್ಗ| ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 15 ಹಾಸಿಗೆಯುಳ್ಳ ಕೋವಿಡ್ ಕೇರ್ ಸೆಂಟರ್ ಸಜ್ಜು

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರ ೧೫ ಹಾಸಿಗೆಯುಳ್ಳ ಕೋವಿಡ್ ಕೇರ್ ಸೆಂಟರ್ ಪೂರ್ವ ಸಿದ್ಧತೆಯಾಗಿ ಸಜ್ಜುಗೊಳಿಸಲಾಗಿದೆ. ಕೊರೋನಾ ಪ್ರಕರಣ ಬಂದಲ್ಲಿ ಸೂಕ್ತ ಚಿಕಿತ್ಸೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಿ.ಎಲ್. ಪಾಲಾಕ್ಷ ತಿಳಿಸಿದರು.
ಚಳ್ಳಕೆರೆ ತಾಲ್ಲೂಕಿನ ಸಮುದಾಯ ಆರೋಗ್ಯ ಕೇಂದ್ರ ನಾಯಕನಹಟ್ಟಿಯಲ್ಲಿ ಕೋವಿಡ್ ಕೇರ್ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು, ಈಗಾಗಲೇ ತರಬೇತಿ ನೀಡಿ ೬ ಜನ ಶುಶ್ರೂಷಕಿಯರು, ೬ ಜನ ಡಿ-ದರ್ಜೆ ನೌಕರರನ್ನು ತಾತ್ಕಾಲಿಕವಾಗಿ ನಿಯೋಜನೆ ಮಾಡಿಕೊಂಡು ಅಗತ್ಯ ಔಷದೋಪಚಾರ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೋರಾನ ಪ್ರಕರಣಗಳು ಹೆಚ್ಚಾಗದಂತೆ ಅಗತ್ಯ ಇದ್ದಲ್ಲಿ ಸ್ವಯಂ ರಕ್ಷಣಾ ಪರಿಕರಗಳನ್ನು ಬಳಸಿಕೊಂಡು ಆರೋಗ್ಯ ಇಲಾಖೆಯ ಎಲ್ಲಾ ನೌಕರರು ಜವಬ್ಧಾರಿಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಸಿಬ್ಬಂದಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು. ಸಾರ್ವಜನಿಕರು ಯಾವುದೇ ಅತಂಕ ಪಡದೆ ಕೆಮ್ಮು, ಶೀತ, ಜ್ವರ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕೆಂದು ಮನವಿ ಮಾಡಿದರು.
ರಾಜ್ಯದಲ್ಲಿ ಇದುವರಗೆ ೪೭ ಜನ ಕೊರೋನಾದಿಂದ ಮೃತಪಟ್ಟಿದ್ದಾರೆ. ಇತರೆ ಸಾಮಾನ್ಯ ಮರಣ ಅಸ್ತಮಾ, ಟಿ.ಬಿ., ಪಾರ್ಶ್ವವಾಯು ಸೇರಿದಂತೆ ೯೫೭ ಮರಣಗಳು ಸಂಭವಿಸಿವೆ. ಜಿಲ್ಲೆಯಲ್ಲಿ ಕೊರೋನಾದಿಂದ ಯಾರೂ ಮರಣ ಹೊಂದಿಲ್ಲದಿರುವುದು ಸಂತಸದ ವಿಷಯ. ಸಾರ್ವಜನಿಕರಲ್ಲಿ ಶೇ ೯೭ ರಷ್ಟು ರೋಗ ನಿರೋಧಕ ಶಕ್ತಿ ಇದ್ದು, ಕೇವಲ ೨.೩ ರಷ್ಟು ಜನರಿಗೆ ಕೊರೋನಾ ರೋಗದ ಚಿಕಿತ್ಸೆ ಅವಶ್ಯವಿದೆ. ಸಾರ್ವಜನಿಕರು ರೋಗ ತಡೆಗೆ ಜನನಿಬಿಡ ಪ್ರದೇಶಕ್ಕೆ, ಸಭೆ ಸಮಾರಂಭಗಳಿಗೆ ಹೋಗಬಾರದು. ತಪ್ಪದೇ ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಯ್ದುಕೊಂಡಲ್ಲಿ ಕೊರೋನ ರೋಗ ನಿಯಂತ್ರಿಸಬಹುದು ಎಂದರು.
ಆಡಳಿತಾಧಿಕಾರಿ ಡಾ. ವಿಕಾಸ್, ಡಾ. ಓಬ್ಬಣ್ಣ, ಡಾ. ನಾಗರಾಜ, ಪಾರ್ಮಸಿಸ್ಟ್ ಅಫ್ರೋಜ್ ಭಾಷ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ, ಜಿಲ್ಲಾ ಹಿರಿಯ ಆರೋಗ್ಯ ನೀರಿಕ್ಷಕ ಎಂ.ಬಿ. ಹನುಮಂತಪ್ಪ, ಕಂಬಯ್ಯ, ಶುಶ್ರೂಷಕಿಯರು ಹಾಗೂ ಇತರ ಸಿಬ್ಬಂದಿ ವರ್ಗದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss