ಚಿತ್ರದುರ್ಗ: ವಿಕಲಚೇತನರಿಗೆ ಆಹಾರ ಕಿಟ್ ನೀಡುತ್ತಿರುವ ಎಪಿಡಿ ಸಂಸ್ಥೆಯ ಕಾರ್ಯ ಶ್ಲಾಘನೀಯ. ಇದು ಹೀಗೆ ಮುಂದಯವರೆಯಲಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜನಾಯ್ಕ ಹೇಳಿದರು.
ಬೆನ್ನು ಹುರಿ ಅಪಘಾತಕ್ಕೆ ಒಳಗಾದ ವಿಕಲಚೇತನ ಕುಟುಂಬಗಳಿಗೆ ದಾವಣಗೆರೆ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ) ಮತ್ತು ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ನಗರದ ಜಿಲ್ಲಾ ಅಂಗಿವಿಕಲ ಕಲ್ಯಾಣಧಿಕಾರಿ ಕಛೇರಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಹಾರದ ಕಿಟ್ಗಳನ್ನು ವಿತರಿಸಿ ಅವರು ಮಾತನಾಡಿದರು.
ಎಪಿಡಿ ಸಂಸ್ಥೆ ವಿಕಲಚೇತನರಿಗೆ ೧೯ ಪದಾರ್ಥಗಳು ಸೇರಿದ ಉತ್ತಮ ಕಿಟ್ ವಿತರಣೆ ಮಾಡಿದ್ದಾರೆ. ದೇಶದ ಇಂತಹ ಸಂಕಷ್ಟದ ಸಂಧರ್ಭದಲ್ಲಿ ಸಂಘ ಸಂಸ್ಥೆಗಳು ಉತ್ತಮ ಕಾರ್ಯದ ಮೂಲಕ ನೇರವಾಗುತ್ತಿರುವುದು ಉತ್ತಮ ಬೆಳವಣಿಗೆ. ಇದರಿಂದ ಬಡವರಿಗೆ, ದುರ್ಬಲರಿಗೆ, ನಿರ್ಗತಿಕರಿಗೆ ಅನುಕೂಲವಾಗುತ್ತದೆ ಎಂದರು.
ಜಿಲ್ಲಾ ವಿಕಲಚೇತನರ ಕಲ್ಯಾಣಧಿಕಾರಿ ಜೆ.ವೈಶಾಲಿ ಮಾತನಾಡಿ, ದೇಶದಲ್ಲಿ ಎಲ್ಲರೂ ತುಂಬಾ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವ ಇಂತಹ ಸಮಯದಲ್ಲಿ ವಿಕಲಚೇತನ ಕುಟುಂಬಗಳಿಗೆ ಅನೇಕ ಸಂಘ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳು ಆಹಾರದ ಕಿಟ್ಗಳನ್ನು ವಿತರಣೆ ಮಾಡುತ್ತಿರುವುದು ವಿಕಲಚೇತನರಿಗೆ ತುಂಬಾ ಅನುಕೂಲವಾಗುತ್ತಿದೆ. ಎಪಿಡಿ ಸಂಸ್ಥೆ ಸಹ ವಿಶೇಷವಾಗಿ ಬೆನ್ನುಹುರಿ ಮತ್ತು ಅಪಘಾತಕ್ಕೆ ಒಳಗಾದ ೨೯ ವಿಕಲಚೇತನರಿಗೆ ಆಹಾರದ ಕಿಟ್ ವಿತರಣೆ ಮಾಡಿದ್ದಾರೆ ಎಂದು ತಿಳಿಸಿದರು.
ಎಪಿಡಿ ಸಂಸ್ಥೆ ಸಂಯೋಜಕ ನಿಂಗಪ್ಪ ಕೆ. ದೊಡ್ಡಮನಿ, ಎಪಿಡಿ ಅಸಿಸ್ಟೆಂಟ್ ಥೆರಪಿಸ್ಟ್ ಸುಂಮಗಲ ಈ ಸಂದರ್ಭದಲ್ಲಿ ಹಾಜರಿದ್ದರು.