ಚಿತ್ರದುರ್ಗ: ಮಂಜುನಾಥ ವಿಕಲಚೇತನರ ಕ್ಷೇಮಾಭಿವೃದ್ದಿ ಸೇವಾ ಸಂಘ ಸಂಸ್ಥೆ ಮತ್ತು ಮಲಬಾರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಇಲ್ಲಿನ ಅಂಬಾಭವಾನಿ ದೇವಸ್ಥಾನದ ಆವರಣದಲ್ಲಿ ಅಂಗವಿಕಲರಿಗೆ ಆಹಾರದ ಕಿಟ್ಗಳನ್ನು ವಿತರಿಸಲಾಯಿತು.
ಕಳೆದ ಎಂಟು ತಿಂಗಳಿನಿಂದಲೂ ಕೊರೋನಾ ಕಾಟವಿರುವುರಿಂದ ದೈಹಿಕವಾಗಿ ಆರೋಗ್ಯವಂತರಾಗಿರುವವರ ಜೀವನವೇ ಕಷ್ಟವಾಗಿರುವುದರಿಂದ ಇನ್ನು ವಿಕಲಚೇತನರ ಪಾಡು ಹೇಳುವಂತಿಲ್ಲ. ಅದಕ್ಕಾಗಿ ಆಹಾರದ ಕಿಟ್ಗಳನ್ನು ನೀಡಲಾಯಿತು ಎಂದು ಮಲಬಾರ್ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರು ಹೇಳಿದರು.
ಮಂಜುನಾಥ ವಿಕಲಚೇತನರ ಕ್ಷೇಮಾಭಿವೃದ್ದಿ ಸೇವಾ ಸಂಘ ಸಂಸ್ಥೆಯ ಅಧ್ಯಕ್ಷ ಮಾರುತಿ, ಗೌರವಾಧ್ಯಕ್ಷ ಕೆ.ಹೆಚ್.ಜಯಪ್ರಕಾಶ್, ಖಜಾಂಚಿ ತಿಪ್ಪೇಸ್ವಾಮಿ ಹಾಗೂ ಪದಾಧಿಕಾರಿಗಳು ಹಾಜರಿದ್ದರು.