Sunday, June 26, 2022

Latest Posts

ಚಿತ್ರದುರ್ಗ| ವೇದಾಂತ ಕಂಪನಿಯಿಂದ ಮಕ್ಕಳಿಗಾಗಿ ಡಿಜಿಟಲ್ ಇ-ಲರ್ನಿಂಗ್ ಷಡ್ಯೂಲ್

ಚಿತ್ರದುರ್ಗ: ವೇದಾಂತ ಗಣಿ ಕಂಪನಿಯು ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಒಡಿಶಾ ಗ್ರಾಮಗಳಾದ್ಯಂತ ವಾಟ್ಸಾಪ್ ಗುಂಪುಗಳ ಮೂಲಕ ವೇದಾಂತ ಲಿಮಿಟೆಡ್‌ನ ಪ್ರಮುಖ ಯೋಜನೆ ‘ನಂದ್ ಘರ್’ ಮನೆ-ಶಾಲೆಗಾಗಿ ಇ-ಲರ್ನಿಂಗ್ ಮಾಡ್ಯೂಲ್‌ಗಳನ್ನು ಹೊರತಂದಿದೆ.
‘ಗಣಿಯಿಂದ ಲೋಹದವರೆಗೆ’ ಘೋಷವಾಕ್ಯದ ವೇದಾಂತ ಲಿಮಿಟೆಡ್‌ನ ಪ್ರಮುಖ ಸಿಎಸ್‌ಆರ್ ಕಾರ್ಯಕ್ರಮಕ್ಕೆ ಅನುಗುಣವಾಗಿ ವೇದಾಂತ ‘ನಂದ್ ಘರ್’ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಅಂಗನವಾಡಿಗಳನ್ನು ನಿರ್ಮಿಸಲು ಮತ್ತು ನವೀಕರಿಸಲು ನೆರವಾಗಲಿದೆ.
ವೇದಾಂತದ ನಂದ್ ಘರ್ ಯೋಜನೆಯಲ್ಲಿ ಗೋವಾ ಮತ್ತು ಕರ್ನಾಟಕ ರಾಜ್ಯಗಳಲ್ಲಿ ತಲಾ ಎರಡು ‘ನಂದ್ ಘರ್’ಗಳನ್ನು ನಿರ್ಮಿಸಿದೆ. ಈಗಾಗಲೇ ಭಾರತದ ೭ ರಾಜ್ಯಗಳಲ್ಲಿ ೧೩೦೦ಕ್ಕೂ ಹೆಚ್ಚು ನಂದ್ ಘರ್‌ಗನ್ನು ನಿರ್ಮಿಸಿದೆ. ದೇಶಾದ್ಯಂತ ೧೪ ಲಕ್ಷ ಅಂಗನವಾಡಿಗಳ ಮೂಲಕ ೮.೫ ಕೋಟಿ ಮಕ್ಕಳ ಜೀವನವನ್ನು ಪರಿವರ್ತಿಸುವ ಯೋಜನೆಯಾಗಿದೆ ಎಂದು ವೇದಾಂತ ಕಂಪನಿಯ ಮೂಲಗಳು ತಿಳಿಸಿವೆ.
ಇ-ಲನಿರ್ಂಗ್ ಮಾಡ್ಯೂಲ್‌ಗಳು ಆರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕಥೆಗಳು, ಆಟಗಳು, ಪ್ರಾಸಗಳು, ಗೃಹಾಧಾರಿತ ಚಟುವಟಿಕೆಗಳು, ನೈತಿಕ ವಿಜ್ಞಾನ ಪಾಠಗಳು ಮತ್ತು ಹೆಚ್ಚಿನದನ್ನು ಒಳಗೊಂಡಿದೆ. ರಾಜಸ್ಥಾನದ ಐಸಿಡಿಎಸ್, ಎಲ್ಲಾ ೬೦,೦೦೦+ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಯುನಿಸೆಫ್ ಇ-ವಿಷಯದ ಜೊತೆಗೆ ನಂದ್ ಘರ್ ಇ-ವಿಷಯಗಳನ್ನೂ ಕಲಿಸಲು ಆದೇಶ ಹೊರಡಿಸಿದೆ.
‘ನಂದ್ ಘರ್’ನಲ್ಲಿ ಒದಗಿಸಲಾದ ಪ್ರಮುಖ ಸೇವೆಗಳೆಂದರೆ ಮಕ್ಕಳಿಗೆ ಇ-ಲನಿರ್ಂಗ್, ಬಾಲಾ ವಿನ್ಯಾಸಗಳು ಮತ್ತು ಸ್ಮಾರ್ಟ್ ಕಿಟ್‌ಗಳ ಮೂಲಕ ಪೂರ್ವ-ಶಾಲಾ ಶಿಕ್ಷಣ (೩-೬ ವರ್ಷಗಳು), ಪ್ಯಾಕ್ ಮಾಡಿದ ಬಿಸಿ ಬೇಯಿಸಿದ ಆಹಾರದ ಪೊಟ್ಟಣದ ಮೂಲಕ ಪೋಷಣೆ, ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಸಂಚಾರಿ ಆರೋಗ್ಯ ವ್ಯಾನ್ ಮತ್ತು ಸಮುದಾಯ ಆರೋಗ್ಯ ಕೇಂದ್ರಕ್ಕೆ ಬೆಂಬಲ, ಕೌಶಲ್ಯ, ಸಾಲ ಸಂಪರ್ಕ ಮತ್ತು ಉದ್ಯಮಶೀಲತೆ ಅಭಿವೃದ್ಧಿಯ ಮೂಲಕ ಮಹಿಳಾ ಸಬಲೀಕರಣ ಮುಖ್ಯವಾದವುಗಳಾಗಿವೆ.
ರಾಜಸ್ಥಾನದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಭಾಗದ ಕಾರ್ಯದರ್ಶಿ ಡಾ.ಕೆ.ಕೆ.ಪಾಠಕ್ ಕೋವಿಡ್-೧೯ ಸಾಂಕ್ರಾಮಿಕವು ತರಗತಿ ಶಿಕ್ಷಣವನ್ನು ಮೊಟಕುಗೊಳಿಸಿರುವುದರಿಂದ ಇ-ಕಲಿಕೆ ಪ್ರಪಂಚದಾದ್ಯಂತ ಮುಂಚೂಣಿಗೆ ಬಂದಿದೆ. ಡಬ್ಲ್ಯುಸಿಡಿ, ಐಸಿಡಿಎಸ್ ರಾಜಸ್ಥಾನವು ಇ-ಲನಿರ್ಂಗ್ ಮೂಲಕ ೬೦,೦೦೦+ ಅಂಗನವಾಡಿಗಳಲ್ಲಿ ಯಶಸ್ವಿಯಾಗಿ ಶಿಕ್ಷಣ ನೀಡುತ್ತಿದೆ ಎಂದು ನಂದಘರ್ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೆಚ್ಚು ಅಗತ್ಯವಾದ ಬೆಂಬಲವನ್ನು ನೀಡಿದ ವೇದಾಂತ ಮತ್ತು ಯುನಿಸೆಫ್ ಜಂಟಿ ಪ್ರಯತ್ನದಿಂದ ಇದು ಸಾಧ್ಯವಾಗಿದೆ. ಇ-ಲನಿರ್ಂಗ್ ವಿಷಯವನ್ನು ರಚಿಸುವುದರಿಂದ ಹಿಡಿದು ವಿತರಣೆಯವರೆಗೆ ಈ ಉಪಕ್ರಮದಲ್ಲಿ ವೇದಾಂತದ ಕೊಡುಗೆ ಹೆಚ್ಚು ಪ್ರಶಂಸನೀಯ. ಬದಲಾಗುತ್ತಿರುವ ಯುಗದ ಸಮಯದಲ್ಲಿ, ಈ ಉಪಕ್ರಮವು ಪರಿವರ್ತನೆ ತರಬಲ್ಲದು ಎಂಬುದು ಸಾಬೀತಾಗಿದೆ. ಭಾರತದ ಸಾವಿರಾರು ಹಳ್ಳಿಗಳ ಪ್ರತಿ ಮಗುವಿಗೆ ಇ-ಶಿಕ್ಷಣ ಲಭ್ಯವಾಗುವಂತೆ ನೋಡಿಕೊಳ್ಳಲಾಗಿದೆ ಎಂದಿದ್ದಾರೆ.
ವೇದಾಂತ ಸಂಪನ್ಮೂಲಗಳ ಅಧ್ಯಕ್ಷ ಅನಿಲ್ ಅಗರ್ವಾಲ್ ಮಾತನಾಡಿ, ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಲು ಕಾರಣವಾದ ಕೋವಿಡ್ – ೧೯ ಸಾಂಕ್ರಾಮಿಕ ರೋಗ ಹರಡುವುದರಿಂದ ವಿಶ್ವದಾದ್ಯಂತ ಶತಕೋಟಿ ಮಕ್ಕಳು ಮತ್ತು ಯುವಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಹೆಚ್ಚಿನ ಆದಾಯದ ಕುಟುಂಬಗಳಿಗೆ ತಂತ್ರಜ್ಞಾನ ಮತ್ತು ಇಂಟರ್ನೆಟ್ ಪ್ರವೇಶವಿದೆ. ಆದಾಗ್ಯೂ ಇದು ಅಭೂತಪೂರ್ವ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿರುವ ಕಡಿಮೆ ಆದಾಯದ ಕುಟುಂಬಗಳಿಗೆ ಭಾರಿ ಸಂಕಷ್ಟ ತಂದೊಡ್ಡಿದೆ.
ಈ ಹಂತದಲ್ಲಿ ಅಂಗನವಾಡಿ ಕೇಂದ್ರಗಳು ಮುಚ್ಚಿರುವುದರಿಂದ, ಮಕ್ಕಳ ನಿರಂತರ ಶಿಕ್ಷಣದ ಅವಶ್ಯಕತೆ ನಮ್ಮ ಆದ್ಯತೆಯಾಗಿ ಉಳಿದಿದೆ. ಹೀಗಾಗಿ, ಯಾವುದೇ ಮಗು ಶಿಕ್ಷಣದಿಂದ ವಂಚಿವಾಗಬಾರದು ಎಂಬ ಉದ್ದೇಶದಿಂದ ನಂದ್ ಘರ್ ತನ್ನ ಇ-ಲನಿರ್ಂಗ್ ಮಾಡ್ಯೂಲ್‌ಗಳನ್ನು ಮೊಬೈಲ್ ಫೋನ್ ಗಳ ಮೂಲಕ ಎಲ್ಲಾ ನಂದ್ ಘರ್ ಗ್ರಾಮಗಳಿಗೆ ತಲುಪಿದೆ. ಅಂತರವನ್ನು ಕಡಿಮೆ ಮಾಡಲು ಮತ್ತು ಡಿಜಿಟಲ್ ಸ್ವಯಂ-ಕಲಿಕೆ ಎಲ್ಲರಿಗೂ ಅನಿಯಮಿತ ಸಂಪನ್ಮೂಲವಾಗುವಂತೆ ನೋಡಿಕೊಳ್ಳಲು ಇದು ನಮ್ಮ ಒಂದು ಹೆಜ್ಜೆಯಾಗಿದೆ ಎಂದಿದ್ದಾರೆ.
ಧಾರವಾಡ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (ಡಬ್ಲ್ಯುಸಿಡಿ) ಉಪನಿರ್ದೇಶಕಿ ಭಾರತಿ ಶೆಟ್ಟಿ ಅವರು ‘ಧಾರವಾಡ ಜಿಲ್ಲೆಯ ನಂದ ಘರ್ ಯೋಜನೆಯನ್ನು ಬಹಳ ಚೆನ್ನಾಗಿ ಜಾರಿಗೆ ತರಲಾಗಿದೆ. ಇದು ನಮ್ಮ ಅಂಗನವಾಡಿ ಮಕ್ಕಳು ಎಂದು ನನಗೆ ತುಂಬಾ ಹೆಮ್ಮೆ ತಂದಿದೆ. ಸೌರ ಫಲಕಗಳು, ವಿಶಾಲವಾದ ಅಡುಗೆಮನೆ ಮತ್ತು ತರಗತಿ ಕೋಣೆಗಳಿಂದ ಕೂಡಿದ ಅತ್ಯಾಧುನಿಕ ಮೂಲಸೌಕರ್ಯದಿಂದ ಕಲಿಯಲು ಸಾಧ್ಯವಾಗುತ್ತದೆ. ಈ ನಂದ್ ಘರ್‌ಗಳ ವಿಶಿಷ್ಟ ಲಕ್ಷಣವೆಂದರೆ ಡಿಜಿಟೈಸ್ಡ್ ಫೊರಮ್‌ಗಳು ಮತ್ತು ಸಂವಾದಾತ್ಮಕ ಸಾಫ್ಟ್‌ವೇರ್‌ನಂತಹ ಕೆಲವು ನವೀನ ಶಿಕ್ಷಣ ಸಾಮಗ್ರಿಗಳನ್ನು ಹೊಂದಿದ್ದು, ಅದು ಮಕ್ಕಳಿಗೆ ಮೋಜಿನ ಕಲಿಕೆಯನ್ನು ಒದಗಿಸುತ್ತದೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss