Sunday, August 14, 2022

Latest Posts

ಚಿನ್ನದ ಒಡವೆಗಳಿದ್ದ ವ್ಯಾನಿಟಿ ಬ್ಯಾಗ್‍ ಅಪಹರಿಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಬಂಧನ

ಚಿಕ್ಕಮಳೂರು: ಚಿನ್ನದ ಒಡವೆಗಳಿದ್ದ ವ್ಯಾನಿಟಿ ಬ್ಯಾಗ್‍ವೊಂದನ್ನು ಅಪಹರಿಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆಲ್ದೂರು ಹೋಬಳಿ ಹಾಂದಿ ಗ್ರಾಮದ ಸಂತೆ ಮಾರ್ಕೆಟ್ ನಿವಾಸಿ ಅಲಿ ಮುಬಾರಕ್ ಹಾಗೂ ಫರ್ವೀನ್ ಬಂಧಿತ ಆರೋಪಿಗಳಾಗಿದ್ದು, ಅವರಿಂದ 61,100 ರೂ. ಮೊತ್ತದ ಚಿನ್ನಾಭರಣ, ಮೊಬೈಲ್ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಚಿಕ್ಕಮಗಳೂರು ನಗರದ ಎಂಜಿ ರಸ್ತೆಯ ಕಾಮಧೇನು ಜ್ಯುವೆಲ್ಲರಿ ಶಾಪ್‍ನಲ್ಲಿ ಸೆ.10 ರಂದು ಕಾಲುಂಗುರ ಖರೀದಿಸಲೆಂದು ಬಂದಿದ್ದ ಗಿಡ್ಡೇನಹಳ್ಳಿ ಗ್ರಾಮದ ಮೋಹನ್ ಕುಮಾರ್ ಎಂಬುವವರ ಪತ್ನಿಯ ವ್ಯಾನಿಟಿ ಬ್ಯಾಗನ್ನು ಆರೋಪಿಗಳು ಕಳವು ಮಾಡಿದ್ದರು. ಅದರಲ್ಲಿ 62,200 ರೂ. ಬೆಲೆಯ ಚಿನ್ನದ ಓಲೆ, ಜುಮುಕಿ, ಬೆಳ್ಳಿ ಆಭರಣಗಳು, ಮೊಬೈಲ್ ಇತ್ತೆಂದು ಪೊಲೀಸರಲ್ಲಿ ದೂರು ನೀಡಲಾಗಿತ್ತು.
ಮೂಡಿಗೆರೆ ಪೊಲೀಸರು ನೀಡಿದ ಮಾಹಿತಿ ಆಧರಿಸಿ ಚಿಕ್ಕಮಗಳೂರು ನಗರಠಾಣೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss