Friday, July 1, 2022

Latest Posts

ಚಿನ್ನ,ಬೆಳ್ಳಿ ದರದಲ್ಲಿ ಹೆಚ್ಚಳ: ಇವತ್ತಿನ ಬೆಲೆ ಎಷ್ಟಿದೆ ಗೊತ್ತಾ?

ನವದೆಹಲಿ: ವಿಶ್ವದೆಲ್ಲೆಡೆ ಕೊರೋನಾ ಆರ್ಭಟ ಹೆಚ್ಚಾಗುತ್ತಿರುವ ನಡುವೆಯೇ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಏರಿಕೆಯಾಗುತ್ತಿದೆ. ಕಳೆದ ಕೆಲ ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆ ನಿರಂತರವಾಗಿ ಹೆಚ್ಚಾಗುತ್ತಲೇ ಇದೆ. ಇಂದು 10 ಗ್ರಾಂ ಚಿನ್ನದ ಬೆಲೆ 47,950 ರೂ ನಿಂದ 47,960 ರೂಪಾಯಿಗೆ ಏರಿಕೆಯಾಗಿದೆ. ಬೆಳ್ಳಿ ದರದಲ್ಲಿ ಕೂಡ ಏರಿಕೆ ಕಂಡಿದ್ದು, 1 ಕೆ.ಜಿ ಬೆಳ್ಳಿಗೆ 48,670 ರೂಪಾಯಿ ಆಗಿದೆ. ಈ ಮೂಲಕ ದೇಶಾದ್ಯಂತ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಗುಡ್​ ರಿಟರ್ನ್ಸ್​ ವೆಬ್​ವೈಟ್​ ಪ್ರಕಾರ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 47,760 ರೂಪಾಯಿ ಇದೆ. ಚೆನ್ನೈನಲ್ಲಿ 46,090 ರೂಪಾಯಿ, ಮುಂಬೈನಲ್ಲಿ 46,860 ರೂ ಇದೆ ಎಂದು ತಿಳಿದು ಬಂದಿದೆ. ಚೆನ್ನೈನಲ್ಲಿ 24 ಕ್ಯಾರಟ್ ಚಿನ್ನದ ಬೆಲೆ 50,280 ರೂಪಾಯಿಗೆ ಏರಿಕೆಯಾಗಿದೆ. ಅಬಕಾರಿ ಸುಂಕ, ರಾಜ್ಯ ತೆರಿಗೆಗಳು ಮತ್ತು ಶುಲ್ಕ ವಿಧಿಸುವಿಕೆಯಿಂದಾಗಿ ಭಾರತದಾದ್ಯಂತ ಚಿನ್ನಾಭರಣಗಳ ಬೆಲೆಗಳು ಬದಲಾಗುತ್ತಿವೆ ಎಂದು ತಿಳಿದು ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss